Site icon Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: 170 ಕೆ.ಜಿ. ತೂಕದ ಮುರು ಮೀನು ಬಲೆಗೆ !

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಗಂಗೊಳ್ಳಿಯಿಂದ ಮೀನುಗಾರಿಕೆಗಾಗಿ ತೆರಳಿದ್ದ ಜಲದುರ್ಗಾ ಬೋಟ್‌ನ ಬಲೆಗೆ ಸುಮಾರು 170 ಕೆ.ಜಿ. ತೂಕದ ಮುರು ಮೀನು ಬಿದ್ದಿದೆ.  ಸ್ಥಳೀಯವಾಗಿ ಗೊಬ್ಬರ ಮೀನು ಎಂದೂ ಕರೆಯಲಾಗುತ್ತದೆ. ಭಟ್ಕಳದ ಮಾರಾಟಗಾರರು ಇದನ್ನು ಖರೀದಿಸಿದ್ದು, ಕೆ.ಜಿ.ಗೆ 330 ರೂ.ನಂತೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಸಣ್ಣ ಗಾತ್ರದ ಮುರು ಮೀನು ಸಾಮಾನ್ಯವಾಗಿದ್ದು, ಇಷ್ಟು ದೊಡ್ಡ ಗಾತ್ರದ್ದು ಅಪರೂಪ ಎಂದು ಮೀನುಗಾರರು ತಿಳಿಸಿದ್ದಾರೆ.

 

Exit mobile version