Site icon Kundapra.com ಕುಂದಾಪ್ರ ಡಾಟ್ ಕಾಂ

ಸ್ವಾತಂತ್ರ್ಯ ದಿನಾಚರಣೆ ದಿನದ ಸಂಭ್ರಮಕ್ಕಷ್ಟೇ ಸೀಮಿತವಾಗದಿರಲಿ

ಸ್ವಾತಂತ್ರ್ಯ ಎಂಬ ಆಸ್ತಿಯನ್ನು ನಮ್ಮದಾಗಿಸಿಕೊಂಡು ಅರವತ್ತಾರು ವರ್ಷಗಳು ಸರಿದು ಹೋಯಿತು. ವರ್ಷಗಳು ಸರಿದಂತೆಲ್ಲಾ ಪ್ರಶ್ನೆಯೊಂದು ಕಾಡಲಾರಂಭಿಸಿದೆ; ನಿಜಕ್ಕೂ ನಾವು ಸ್ವತಂತ್ರರಾ?

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅನಾಚಾರ, ಅತ್ಯಾಚಾರ, ಅಸಮಾನತೆ, ಅಭದ್ರತೆಯ ಪಿಡುಗು ಇಂತಹದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸಿಹಿ ತಿಂದು ಸಂಭ್ರಮಿಸಿ ಮಲಗಿದರೆ ಏನು ಬಂತು? ಸ್ವಾತಂತ್ರ್ಯ ದಿನಕ್ಕೊಂದು ನಿಜವಾದ ಅರ್ಥ ಕಟ್ಟಿಕೊಡೋದು ಬೇಡವೇ?

ನಮ್ಮ ದೇಶ ಇನ್ನದೇಷ್ಟೋ ರಂಗಗಳಲ್ಲಿ ಅಭಿವೃದ್ಧಿ ಕಾಣಬೇಕಿದೆ. ನಮ್ಮನ್ನಾವರಿಸಿರುವ ರಾಜಕೀಯದೊಳಗಿನ ಹೊಲಸು , ಭ್ರಷ್ಟಾಚಾರ ತೊಲಗಬೇಕಿದೆ. ಸಾಫ್ಟ್ ಸಂಸ್ಕ್ರತಿಯ ಯುಗದಲ್ಲೂ ಇರುವ ಮೂಢನಂಬಿಕೆ, ಸಾಮಾಜಿಕ ಅನಿಷ್ಠಗಳಿಗೆ ಅಂತ್ಯ ಹಾಡಬೇಕಿದೆ. ಬಡವ-ಬಲ್ಲಿದನ ನಡುವಿನ ಅಂತರ ಅಳಿಯಬೇಕಿದೆ. ಹೀಗೆ ನಮ್ಮ ನಡುವಿನ ಮುಲಭೂತ ಸಮಸ್ಸೆಗಳಿಗೊಂದು ಪರಿಹಾರ ಕಂಡುಕೊಂಡಾಗಲೇ ನಾವು ದಕ್ಕಿಸಿಕೊಂಡ ಸ್ವಾತಂತ್ರ್ಯಕ್ಕೊಂದು ನಿಜಾರ್ಥದಲ್ಲಿ ನಮ್ಮದಾಗುವುದು.

ಕುಂದಾಪ್ರ ಡಾಟ್ ಕಾಂ ಓದುಗರೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು.

Exit mobile version