Kundapra.com ಕುಂದಾಪ್ರ ಡಾಟ್ ಕಾಂ

ಕಟುಸತ್ಯ- ವಿಶ್ವದ ವಿಚಿತ್ರಗಳು!

ನಾವಿರುವ ವಿಶ್ವದಲ್ಲಿ ಅರ್ಥವಾಗದ ಅದೆಷೋ ವಿಚಿತ್ರಗಳು ನಡೆದು ಹೋಗತ್ತದೆ. ಅದು ಅಸಹಜವೆನಲ್ಲ. ನಮ್ಮ ಬದುಕಿನ ನಿತ್ಯ- ಸತ್ಯಗಳು. ಅಂತಹ ವಿಚಿತ್ರಗಳ ಪುಟ್ಟ ಪಟ್ಟಿ ಇಲ್ಲಿದೆ. ಕಥಜರ್ಜರ್ ಕಾಲರ್ನ ಎಂಬುವವರು ಇಂಟರ್ನೆಟ್ ನಲ್ಲಿ ಪ್ರಕಟಿಸಿರುವ ಕುತೂಹಲಕಾರಿ ಸಂಗತಿಗಳನ್ನು ನಿಮಗಾಗಿ ಕನ್ನಡಕ್ಕೆ ಅನುವಾದಿಸಲಾಗಿದೆ. ವಾಸ್ತವತೆಯ ಕಿರು ಸಾರಾಂಶ ಕೇವಲ ಪರಕೀಯರಿಗೆ ಮಾತ್ರ ಅನ್ವಹೀಸುವುದೋ ಅಥವಾ ನಮ್ಮೆಲ್ಲರಿಗೂ ಅನ್ವಹಿಸುತ್ತದೋ? ಓದಿ ನೀವೇ ಅರಿತುಕೊಳ್ಳಿ.

*ನಮ್ಮ ಮನೆಗಳು ದೊಡ್ಡದಾಗುತ್ತಿವೆ, ಆದರೆ ಕುಟುಂಬ ಚಿಕ್ಕದಾಗುತ್ತಿದೆ.

*ಅನುಕೂಲಗಳು ಹೆಚ್ಚಿವೆ, ಆದರೆ ಅನುಭವಿಸಲು ಸಮಯವೇ ಇಲ್ಲ!

*ನಮ್ಮ ಆಸ್ತಿಪಾಸ್ತಿಯ ಬೆಲೆ ಏರಿದೆ, ಆದರೆ ನಮ್ಮ ಮೌಲ್ಯಗಳೇ ಇಳಿದಿವೆ!

*ರಸ್ತೆಗಳು ವಿಶಾಲವಾಗಿವೆ, ಆದರೆ ದೃಷ್ಟಿಕೋನಗಳು ಸಂಕುಚಿತವಾಗಿವೆ!

*ನಾವು ಹೆಚ್ಚು ಖರೀದಿಸುತ್ತೇವೆ. ಆದರೆ ಕಡಿಮೆ ಉಪಯೋಗಿಸುತ್ತೇವೆ.

*ಅಸಾಮಾನ್ಯ ವಿದ್ಯಾರ್ಹಗಳಿವೆ, ಆದರೆ ಸಾಮಾನ್ಯ ಜ್ಞಾನ ಕಡಿಮೆಯಾಗಿದೆ!

*ವಿಷಯ ಸಂಗ್ರಹ ಹೆಚ್ಚಾಗಿದೆ, ಆದರೆ ವಿವೇಚನೆ ಕಡಿಮೆಯಾಗಿದೆ!

*ಪರಿಣತರು ಹೆಚ್ಚಾಗಿದ್ದಾರೆ, ಸಮಸ್ಯೆಗಳೂ ಹೆಚ್ಚಿವೆ!

*ನಾವು ಹೆಚ್ಚು ಗಳಿಸುತ್ತೇವೆ ಆದರೆ ಕಡಿಮೆ ನಗುತ್ತೇವೆ.

*ತುಂಬ ವೇಗವಾಗಿ ಹೋಗುತ್ತೇವೆ, ತುಂಬ ಬೇಗ ಕೋಪಿಸಿಕೊಳ್ಳುತ್ತೇವೆ!

*ರಾತ್ರಿ ತುಂಬ ಹೊತ್ತು ಎದ್ದಿರುತ್ತೇವೆ, ಬೆಳಿಗ್ಗೆ ತುಂಬ ಬಳಲಿಕೆಯಿಂದ ಏಳುತ್ತೇವೆ!

*ಔಷಧಿಗಳು ಹೆಚ್ಚಿವೆ, ಆರೋಗ್ಯ ಕಡಿಮೆ ಆಗಿದೆ!

*ಬರವಣಿಗೆ ಹೆಚ್ಚಾಗಿದೆ, ಅದರೆ ಅರಿವು ಕಡಿಮೆಯಾಗಿದೆ!

*ಹೆಚ್ಚು ಆಯೋಜಿಸುತ್ತೇವೆ ಆದರೆ ಕಡಿಮೆ ಸಾಧಿಸುತ್ತೇವೆ!

*ಧಾವಂತ ಪಡುವುದನ್ನು ಕಲಿತಿದ್ದೇವೆ, ಆದರೆ ನಿಧಾನವನ್ನು ಮರೆತಿದ್ದೇವೆ!

*ಗಂಡಹೆಂಡಿರ ದುಡಿಮೆ ಹೆಚ್ಚಾಗಿದೆ, ಆದರೆ ವಿಚ್ಛೇದನಗಳೂ ಹೆಚ್ಚಾಗಿವೆ!

*ನಮ್ಮ ಆಥರ್ಿಕ ಸ್ಥಿತಿ ಸುಧಾರಿಸಿದೆ, ಆದರೆ ನೈತಿಕತೆ ಕುಸಿದಿದೆ!

*ಹೆಚ್ಚು ವಿರಾಮವಿದೆ, ಆದರೆ ಕಡಿಮೆ ಆರಾಮವಿದೆ!

*ಕಡಿಮೆ ಓದುತ್ತೇವೆ, ತುಂಬ ಟೀವಿ ನೋಡುತ್ತೇವೆ, ಮತ್ತು ಅಪರೂಪಕ್ಕೆ ಪ್ರಾಥರ್ಿಸುತ್ತೇವೆ.

*ಜೀವನೋಪಾಯದ ದಾರಿ ಅರಿತಿದ್ದೇವೆ ಆದರೆ ಜೀವಿಸುವುದು ಹೇಗೆಂಬುದನ್ನು ಮರೆತಿದ್ದೇವೆ!

*ತುಂಬ ಹೆಚ್ಚು ಮಾತನಾಡುತ್ತೇವೆ, ತುಂಬ ಕಡಿಮೆ ಪ್ರೀತಿಸುತ್ತೇವೆ ಮತ್ತು ತುಂಬ ಸುಳ್ಳು ಹೇಳುತ್ತೇವೆ!

*ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತಿದ್ದೇವೆ, ಆದರೆ ವರ್ಷಗಳಿಗೆ ಜೀವ ತುಂಬುತಿಲ್ಲ!
*ಗಾಳಿಯನ್ನು ಶುದ್ಧೀಕರಿಸಿದ್ದೇವೆ, ಆದರೆ ನಮ್ಮ ಆತ್ಮವನ್ನು ಮಲೀನಗೊಳಿಸಿದ್ದೇವೆ!

*ನಾವು ಬಹಿರಂಗದಲ್ಲಿ ಗೆಲ್ಲುತ್ತಿದ್ದೇವೆ, ಆದರೆ ಅಂತರಂಗದಲ್ಲಿ ಸೋಲುತ್ತಿದ್ದೇವೆ!

*ಅಣುವನ್ನು ಖಂಡತುಂಡ ಮಾಡಿದ್ದೇವೆ, ಆದರೆ ನಮ್ಮ ಅಹಂ ಅಖಂಡವಾಗಿ ಉಳಿದಿದೆ!

*ಇದು ವಿವಿಧ ಭಕ್ಷಗಳ ಕಾಲ ಹಾಗೂ ಕಡಿಮೆ ಜೀರ್ಣಶಕ್ತಿಯ ಕಾಲ!

*ಎತ್ತರದ ಆಕಾರ, ಆದರೆ ಕುಬ್ಜ ವ್ಯಕ್ತಿತ್ವದ ಮನುಷ್ಯರ ಕಾಲ!

*ವಿಶ್ವಶಾಂತಿಯ ಬಗ್ಗೆ ಮಾತಾಡುತ್ತೇವೆ, ಆದರೆ ಮನೆಯವರೊಂದಿಗೆ ಕಾದಾಡುತ್ತೇವೆ!

*ಅದ್ಭುತ ವಿನ್ಯಾಸದ ನಿವಶಗಳಿವೆ, ಆದರೆ ವಾಸಸ್ಥಾನವೇ ಮುರಿದು ಬಿದ್ದಿದೆ!

*ನಾವು ಚಂದ್ರಲೋಕವನ್ನು ಮುಟ್ಟಿ ಬಂದಿದ್ದೇವೆ, ಆದರೆ ನಮ್ಮ ಕಾಂಪೌಂಡ್ ದಾಟಿ ನೆರೆಯವರನ್ನು ಭೇಟಿಯಾಗಲು ಹೋಗಿಲ್ಲ!

*ಹಸಿವು ಹೆಚ್ಚಿಸಲು, ಹಸಿವು ತಗ್ಗಿಸಲು, ಜೀರ್ಣಿಸಿಕೊಳ್ಳಲು ಮಾತ್ರೆಗಳಿವೆ, ದಪ್ಪಗಾಗಲು, ಸಣ್ಣಗಾಗಲು, ತೆಪ್ಪಗಿರಲು, ಕುಪ್ಪಳಿಸುತ್ತಿರಲು ಮಾತ್ರೆಗಳಿವೆ!

ಸಂದೇಶದ ಹಿಂದಿನ ಸತ್ಯ ಅರಿತು ನೆಮ್ಮದಿಯ ಬದುಕನ್ನು ಸಾಗಿಸೋಣ.

Exit mobile version