Site icon Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ: ದ್ವಾರ ಗೋಪುರ ಲೋಕಾರ್ಪಣೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯ ಕಳಿಹಿತ್ಲು ಶ್ರೀ ಸೀತಾಳಿ ನವದುರ್ಗೆ ಅಮ್ಮನವರ ದೇವಸ್ಥಾನದ ನೂತನ ದ್ವಾರ ಗೋಪುರದ ಲೋಕಾರ್ಪಣೆ ಸಮಾರಂಭ ಜರಗಿತು.

ಗಂಗೊಳ್ಳಿಯ ಪುರೋಹಿತರಾದ ಜಿ.ನಾರಾಯಣ ವಿಶ್ವನಾಥ ಆಚಾರ್ಯ ಅವರು ದೇವಸ್ಥಾನದ ನೂತನ ದ್ವಾರ ಗೋಪುರವನ್ನು ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು. ಪುರೋಹಿತರಾದ ಜಿ.ರಾಘವೇಂದ್ರ ಆಚಾರ್ಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಚಿಕ್ಕಯ್ಯ ಪೂಜಾರಿ ಹೆಮ್ಮಾಡಿಮನೆ, ಶೀನ ಪೂಜಾರಿ ಸದಿಯನಮನೆ, ಶ್ರೀನಿವಾಸ ದೇವಾಡಿಗ ಓಣಿಮನೆ, ಕೃಷ್ಣ ದೇವಾಡಿಗ ಹೆಬ್ಬಾಗಿಲು ಮನೆ, ಆಡಳಿತ ಮಂಡಳಿ ಅಧ್ಯಕ್ಷ ಉಮಾನಾಥ ದೇವಾಡಿಗ, ಕಾರ್ಯದರ್ಶಿ ಗಣೇಶ ಟಿ.ಪೂಜಾರಿ, ಪಾತ್ರಿಗಳಾದ ರಘು ಪೂಜಾರಿ, ಜಗನ್ನಾಥ ಪೂಜಾರಿ, ಸುಶೀಲ ಪೂಜಾರಿ, ವಸಂತ ಭಂಡಾರಿ, ದೇವಪ್ಪ ಪೂಜಾರಿ, ಶಂಕರ ದೇವಾಡಿಗ, ಟಿ.ವಾಸುದೇವ ದೇವಾಡಿಗ, ನಿತ್ಯಾನಂದ ದೇವಾಡಿಗ, ವಸಂತ ದೇವಾಡಿಗ, ದಯಾನಂದ ದೇವಾಡಿಗ, ಸುಧಾಕರ ದೇವಾಡಿಗ, ವಾಸು ಪೂಜಾರಿ, ರಾಜ ಪೂಜಾರಿ, ನಾಗೇಶ ಭಂಡಾರ್‌ಕಾರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version