Kundapra.com ಕುಂದಾಪ್ರ ಡಾಟ್ ಕಾಂ

ಯಳಜಿತ ಹಿರಿಯ ಪ್ರಾಥಮಿಕ ಶಾಲೆ ಉಳಿವಿಗೆ ಹಳೆ ವಿದ್ಯಾರ್ಥಿಗಳ ಕಸರತ್ತು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಶಾಲೆ ಮುಚ್ಚುತ್ತಿದ್ದಾರೆ. ಎಂಬ ಕೂಗಿನ ನಡುವೆಯೇ ಒಂದಷ್ಟು ಶಾಲೆಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಗೋಚರಿಸುತ್ತಿವೆ.

ಕನ್ನಡ ಶಾಲೆಗಳ ಕಾಲ ಮುಗಿಯಿತೆನ್ನುವ ಆತಂಕದ ನಡುವೆಯೇ ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರು ತಾವು ಕಲಿತ ಶಾಲೆಯನ್ನು ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಸಮನಾಗಿ ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಿಸುವಲ್ಲಿ, ಶಾಲೆಗೆ ಅಗತ್ಯವಾದ ಮೂಲಭೂತ ಸೌಕರ್ಯವನ್ನು ಒದಗಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ ಎನ್ನುವುದು ಸದಸ್ಯ ಆಶಾದಾಯಕ ಸಂಗತಿ.

ಯಳಜಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿಗಳು ಕೂಡ ತಮ್ಮ ಶಾಲೆಯ ಸರ್ವತೋಮುಖ ಏಳಿಗೆಗಾಗಿ ಪಣತೊಟ್ಟಿದ್ದಾರೆ. ತಾವು ಕಲಿತ ಶಾಲೆ ಅಭಿವೃದ್ಧಿಯನ್ನು ಕಾಣಬೇಕು ಇಂದಿನ ವಿದ್ಯಾರ್ಥಿಗಳ ಓದಿಗೆ ಪೂರಕವಾದ ವ್ಯವಸ್ಥೆಯನ್ನು ಮಾಡಕೊಡಬೇಕು ಎಂಬ ನೆಲೆಯಲ್ಲಿ ಹಳೆವಿದ್ಯಾರ್ಥಿಗಳು ಹಾಗೂ ಊರಿನವರ ಜೊತೆಗೂಡಿ ‘ಯಳಜಿತ ವಿದ್ಯಾಚಕ್ರ ಎಜುಕೇಶನಲ್ ಟ್ರಸ್ಟ್’ ಸ್ಥಾಪಿಸಿ ಆ ಮೂಲಕ ಶಾಲೆಗೆ ನೆರವಾಗುವ ಗಟ್ಟಿ ಮನಸ್ಸು ಮಾಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಟ್ರಸ್ಟ್ ಮೂಲಕ ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಿಕೊಡುವುದು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅಗತ್ಯ ಪರಿಕರ ಒದಗಿಸುವುದು, ಕಂಪ್ಯೂಟರ್ ಶಿಕ್ಷಣ, ಇಂಗ್ಲೀಷ್ ಶಿಕ್ಷಣಕ್ಕೆ ನೆರವಾಗುವುದು, ಸುಸಜ್ಜಿತ ಆಟದ ಮೈದಾನ ನಿರ್ಮಿಸುವುದು, ಮಕ್ಕಳಿಗೆ ಪ್ರವಾಸ, ರಾಷ್ಟ್ರೀಯ ಹಬ್ಬಗಳ ಆಚರಣೆ ಸೇರಿದಂತೆ ಹಲವು ಪ್ರಮುಖ ಉದ್ದೇಶಗಳೊಂದಿಗೆ ಶಾಲೆಯ ಪ್ರಗತಿಯಲ್ಲಿ ಕೈಜೋಡಿಸಿ ಮಾದರಿ ಶಾಲೆಯನ್ನಾಗಿ ರೂಪಿಸುವ ಹಂಬಲದಲ್ಲಿದ್ದಾರೆ.

ಹಾಗಾಗಿ ದೂರದೂರಿನಲ್ಲಿ ನೆಲೆಸಿರುವ ಹಳೆವಿದ್ಯಾರ್ಥಿಗಳು ಹಾಗೂ ಏಳಜಿತ ಪರಿಸವರವರ ಸಲಹೆ ಸೂಚನೆಗಳಲ್ಲಿ ಪಡೆದು ಮುಂದಿನ ಹೆಜ್ಜೆ ಇಡಲು ನಿರ್ಣಯಿಸಿದ್ದು, ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಕೋರಿಕೊಂಡಿದ್ದಾರೆ.

 

Exit mobile version