ಬೈಂದೂರು: ಉತ್ಸವ ಸಮಿತಿ ಶಿರೂರು,ಅರುಣ ಪಬ್ಲಿಸಿಟಿ ಶಿರೂರು ಇದರ ಆಶ್ರಯದಲ್ಲಿ ನಡೆಯುತ್ತಿರುವ ಅದ್ದೂರಿಯ ಸಾಂಸ್ಕ್ರತಿಕ ವೈಭವ ಶಿರೂರು ಉತ್ಸವ 2015 ಕಾರ್ಯಕ್ರಮ ಶಿರೂರು ಕಾಲೇಜು ಮೈದಾನದ ಕೀರ್ತಿ ಶೇಷ ವಿ.ಐ ಶೆಟ್ಟಿ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಮಾತನಾಡಿ ಸರಕಾರೇತರ ಸಂಘಟನೆಯೊಂದು ಸಾರ್ವಜನಿಕ ಸಡಗರದಲ್ಲಿ ನಡೆಸಿದ ಈ ಕಾರ್ಯಕ್ರಮ ಇತರ ಕಾರ್ಯಕ್ರಮಗಳಿಗೆ ಮಾದರಿಯಾಗಿದೆ.ಗ್ರಾಮೀಣ ಭಾಗದ ಸಾಂಸ್ಕ್ರತಿಕ ಆಸಕ್ತಿ ಮತ್ತು ಸಂಘಟನೆ ಸಾಮರ್ಥ್ಯ ಶ್ಲಾಘನೀಯವಾಗಿದೆ.ಕೇವಲ ಸರಕಾರದಿಂದ ಅಭಿವೃದ್ದಿಯ ನಿರೀಕ್ಷೆಗಿಂತ ಊರಿನ ಕಾಳಜಿಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಅಪೇಕ್ಷಿಸುವ ಉತ್ಸವದ ಮೂಲಕ ರಾಜ್ಯಮಟ್ಟದಲ್ಲಿ ಉತ್ತಮ ಸಂದೇಶ ನೀಡಿದಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ಕೆ.ಲಕ್ಷ್ಮಿನಾರಾಯಣ ಮಾತನಾಡಿ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಊರಿನ ಅಭಿವೃದ್ದಿಗೆ ಪ್ರಯತ್ನಿಸುತ್ತಿರುವ ಶಿರೂರಿನ ಸಾಧನೆ ಅನನ್ಯವಾಗಿದೆ.ಇಂತಹ ಕಾರ್ಯಕ್ರಮಗಳು ಇತರ ಊರುಗಳಿಗೆ ಪ್ರೇರಣೆ ಅತ್ಯಂತ ವಿಭಿನ್ನ ಕಾರ್ಯಕ್ರಮ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಕೀರ್ತಿ ಮುಕುಟವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ.ಸುಕುಮಾರ ಶೆಟ್ಟಿ,ಆರ್.ವಿ.ಶೆಟ್ಟಿ ಹುಬ್ಬಳ್ಳಿ, ಜಿ.ಪಂ ಸದಸ್ಯ ಬಾಬು ಶೆಟ್ಟಿ,ಶಿರೂರು ಗ್ರಾ.ಪಂ ಅಧ್ಯಕ್ಷ ರಾಮ ಮೇಸ್ತ,ನಾಗಶ್ರೀ ಧತ್ತಿನಿದಿ ಪ್ರತಿಷ್ಟಾನದ ಟ್ರಸ್ಟಿ ಮಂಜುನಾಥ ಬಿಲ್ಲವ,ಸಿ.ಎ.ಶ್ರೀನಿವಾಸ ಶೆಟ್ಟಿ ಮುಂಬ್ಯೆ,ದಯಾನಂದ ಆರ್.ಶೆಟ್ಟಿ,ಉದ್ಯಮಿ ರಾಮಚಂ ದ್ರ ಬಿ.ಶಿರೂರಕರ್,ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಉದ್ಯಮಿ ಪ್ರಕಾಶ ಪ್ರಭು,ಧ.ಗ್ರಾ.ಯೋ.ಮೇಲ್ವಿಚಾರಕ ವಿಜಯ ಕುಮಾರ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು.ಕಾರ್ಯಕ್ರಮ ಸಂಯೋಜಕ ಅರುಣ ಕುಮಾರ ಶಿರೂರು ಕಾರ್ಯಕ್ರಮ ನಿರೂಪಿಸಿದರು.ಪ್ರಸಾದ ಪ್ರಭು ವಂದಿಸಿದರು.