Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನ ಭಜನೆ ಕಾರ್ಯಕ್ರಮ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ವತಿಯಿಂದ ಸುಮಾರು ಓಂಭತ್ತು ದಿನಗಳ ಕಾಲ ವಿಶೇಷ ಕುಣಿತ ಭಜನೆ ಕಾರ್ಯಕ್ರಮ ನಡೆಯಿತು.

ಪ್ರತಿದಿನ ಸಂಜೆ ೭ ರಿಂದ ರಾತ್ರಿ ೯.೩೦ರ ವರೆಗೆ ದೇವಸ್ಥಾನ ಪರಿಸರದ ದೊಡ್ಡೋಣಿ ರಸ್ತೆಯಲ್ಲಿರುವ ಹಲವಾರು ಮನೆಗಳಿಗೆ ತೆರೆಳಿ ದೇವರ ಭಜನೆ, ಸಂಕೀರ್ತನೆಯೊಂದಿಗೆ ಸಾಗಿ ಬಂದ ಭಜನಾ ತಂಡ ಮನೆಯ ಎದುರುಗಡೆ ಬಿಡಿಸಿದ ರಂಗೋಲಿ, ತುಳಸಿಕಟ್ಟೆ ಹಾಗೂ ದೀಪಕ್ಕೆ ಕುಣಿತ ಭಜನೆಯ ಮೂಲಕ ಸುತ್ತು ಬಂದು ಮುಂದೆ ಸಾಗಿದರು. ಕಾರ್ಯಕ್ರಮದ ಕೊನೆಯ ದಿನದಂದು ದೊಡ್ಮನೆಬೆಟ್ಟು ಶ್ರೀ ಆಂಜನೇಯ ದೇವಸ್ಥಾನ, ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಶ್ರೀ ಕೋದಂಡ ರಾಮ ದೇವಸ್ಥಾನ, ಶ್ರೀ ಮಾರಿಯಮ್ಮ ದೇವಸ್ಥಾನ ಹಾಗೂ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ದೇವರ ಸಮ್ಮುಖದಲ್ಲಿ ಕುಣಿತ ಭಜನೆ ನೆರವೇರಿಸಿದರು. ಈ ತಂಡದಲ್ಲಿ ಮಕ್ಕಳು, ಯುವಕರು, ಯುವತಿಯರು ಹೀಗೆ ಎಲ್ಲಾ ವಯೋಮಾನದ ಸದಸ್ಯರ ಉಪಸ್ಥಿತಿ ವಿಶೇಷ. ಇತ್ತೀಚೆಗೆ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ವಿ ಕಾಮತ್ ಮಾತನಾಡುತ್ತಾ ಭಜನೆಯ ಮೂಲಕ ದೇವಸ್ಥಾನದ ಸಾನಿಧ್ಯ ಹೆಚ್ಚಿಸಲು ಸಾಧ್ಯ ಎಂದು ಹೇಳಿದ್ದರು. ಇದರಿಂದ ಪ್ರೇರಣೆಗೊಂಡ ದೇವಸ್ಥಾನದ ಭಜನಾ ಮಂಡಳಿಯ ಸದಸ್ಯರು ಕುಣಿತ ಭಜನೆಯ ಮೂಲಕ ದೇವರ ಸೇವೆ ಸಲ್ಲಿಸಿದರು. ಪ್ರತಿ ದಿನದ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಭಜನಾ ಮಂಡಳಿಯ ಸದಸ್ಯರಿಗೆ ಪನಿವಾರ, ಹಣ್ಣು ಹಂಪಲುಗಳನ್ನು ನೀಡಿ ಸತ್ಕರಿಸಿ ಮುಂದಿನ ದಿನಗಳಲ್ಲಿ ವರ್ಷಂಪ್ರತಿ ಇನ್ನೂ ಹಲವು ದಿನಗಳವರೆಗೆ ಈ ಕಾರ್ಯಕ್ರಮ ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿದ ತಂಡದ ಸರ್ವ ಸದಸ್ಯರನ್ನು ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ಸುಬ್ರಹ್ಮಣ್ಯ ಶೆಟ್ಟಿಗಾರ್ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ರವೀಂದ್ರ ದೊಡ್ಮನೆ, ಶಿಲ್ಪಿ ರಾಜಗೋಪಾಲ ಆಚಾರ್ಯ, ಶ್ರೀ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

 

Exit mobile version