Kundapra.com ಕುಂದಾಪ್ರ ಡಾಟ್ ಕಾಂ

ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡವರ ವಿರುದ್ಧ ಕ್ರಮ: ಐಜಿಪಿ ಹರಿಶೇಖರನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಕ್ರಮ ಮರಳುಗಾರಿಕೆಯಲ್ಲಿ ಶ್ಯಾಮಿಲಾಗಿರುವ ಯಾರೋಬ್ಬರನ್ನು ಬಿಡುವ ಪ್ರಶ್ನೆಯಿಲ್ಲ. ಇದರ ಹಿಂದಿರುವ ಯಾವ ಶಕ್ತಿಯ ಬಿಡುವ ಪ್ರಶ್ನೆಯೇ ಇಲ್ಲ. ಎಲ್ಲರ ಮೇಲೂ ಕೇಸ್ ದಾಖಲು ಮಾಡಲಾಗುತ್ತದೆ. ಬಂಧಿಸಿದವರಲ್ಲಿ ಯಾರು ತಪ್ಪು ಮಾಡಿದ್ದಾರೆ ಯಾರು ಮಾಡಿಲ್ಲ ಎಂಬುದು ನ್ಯಾಯಾಲಯದಲ್ಲಿ ನಿರ್ಣಯವಾಗುತ್ತೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಹರಿಶೇಖರನ್ ಭರವಸೆ ನೀಡಿದರು.

ಮರಳು ಅಡ್ಡೆಗಳ ಮೇಲೆ ದಾಳಿ ಮಾಡಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ಮೇಲೆ ನಡೆದ ಹಲ್ಲೆ ಹಿನ್ನೆಲೆಯಲ್ಲಿ ಕಂಡ್ಲೂರಿಗೆ ಭೇಟಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಕ್ರಮ ಮರಳುಗಾರಿಕೆ ತಡೆಯ ಜವಾಬ್ದಾರಿ ಪೊಲೀಸ್ ಇಲಾಖೆಗೆ ಮಾತ್ರ ಸಂಬಂಧಿಸಿದ್ದಲ್ಲ. ಕಂದಾಯ, ಗಣಿ ಮತ್ತು ಭೂವಿಜ್ಞಾನ, ಲೋಕಪಯೋಗಿ ಇಲಾಖೆ, ಅರಣ್ಯ ಇಲಾಖೆಗೂ ಸಂಬಂಧಪಟ್ಟಿದ್ದು, ಕಂದಾಯ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಗೆ ಗೊತ್ತಿಲ್ಲದೆ ಅಕ್ರಮ ಮರಳು ತೆಗೆಯಯಲು ಸಾಧ್ಯವಿಲ್ಲ. ಎಷ್ಟು ಮರಳು ಅಡ್ಡೆಗಳಿದೆ, ಪರವಾನುಗೆ ಎಷ್ಟಿದೆ, ಎಷ್ಟು ಮರಳು ತೆಗೆಯುತ್ತಿದ್ದಾರೆ ಎಂಬ ಮಾಹಿತಿ ಗಣಿ ಇಲಾಖೆ ಬಳಿ ಇರುತ್ತದೆ. ಅವರು ಮಾಹಿತಿ ಅಕ್ರಮ ಮರಳು ಅಡ್ಡೆ ಬಂದ್ ಮಾಡಲಾಗುತ್ತದೆ. ಅವರಿಗೆ ಏನು ಸಹಾಯ ಬೇಕು ಅಂತ ಕೇಳಿದರೆ ಅದನ್ನು ನೀಡಲು ಇಲಾಖೆ ಸಿದ್ದವಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಸಲಹೆ ನೀಡಲಾಗಿದೆ ಎಂದು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಪರವಾನಿಗೆ ಇದ್ದ ಮರಳು ಗಣಿಗಳು ನೇರವಾಗಿ ಲೋಕೋಪಯೋಗಿ ಇಲಾಖೆ ಡಂಪಿಂಗ್ ಯಾರ್ಡ್‌ಗೆ ಮರಳು ಹಾಕಿಬೇಕಿದ್ದರೂ, ಅದನ್ನು ಬೇರೆ ಕಡೆ ಸಗಾಟ ಮಾಡಲಾಗುತ್ತದೆ. ಮರಳು ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಅವರು ದೂರು ನೀಡಿದರೆ, ಮರಳು ಬೇರೆ ಕಡೆ ಸಾಗಾಟಕ್ಕೆ ಬಿಡದೆ, ಲೋಕೋಪಯೋಗಿ ಇಲಾಖೆ ಸಂಗ್ರಹಕ್ಕೆ ಹಾಕಿಸುವ ಜೊತೆ ಅತಿಕ್ರಮ ಮರಳು ಸ್ಟಾಕ್ ಮಾಡಿದವರ ವಿರುದ್ದವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿರು. ಅಮಾಯಕರ ಬಂಧನ ಮಾಡಲಾಗಿದೆ ಎನ್ನುವುದರಲ್ಲಿ ಹುರುಳಿಲ್ಲ. ತಪ್ಪಿತಸ್ಥರು ಯಾರು ಎಂಬುದನ್ನು ನ್ಯಾಯಲಯ ಹೇಳಲಿದೆ ಎಂದರು.

ಅಫಘಾತ ತಡೆಗೆ ಕ್ರಮ:
ದಿನನಿತ್ಯವೂ ಮಂಗಳೂರು ಹಾಗೂ ಕಾರವಾರ ನಡುವಿನೆ ರಾಷ್ಟ್ರಿಯ ಹೆದ್ದಾರಿ-66ರಲ್ಲಿ ಅಪಘಾತ ಸಂಘವಿಸುತ್ತಿದ್ದು, ಪ್ರಾಣ ಕಳೆದುಕೊಳ್ಳುವವರು, ಗಂಭೀರ ಗಾಯಗೊಳ್ಳುವವರ ಸಂಖ್ಯೆ ಹೆಚ್ಚಿದೆ. ಹೆದ್ದಾರಿ ಅಪಾಘತ ತಡೆಗಟ್ಟುವ ನಿಟ್ಟಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಲೋಕೋಪಯೋಗಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಹೆದ್ದಾರಿ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ತಜ್ಞರ ಸಮಿತಿ ಸರ್ವೆ ಮಾಡಲಿದ್ದು, ಸಮಿತಿ ವರದಿ ಆಧಾರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಗಾಂಜಾ ಪೂರೈಕೆದಾರರ ಮೇಲೆ ಕಣ್ಣು:
ಗಾಂಜಾ ವಿತಕರ ಹಿಡಿಯುವುದರಿಂದ ಗಾಂಜಾ ಮಾರಾಟ ಕಂಟ್ರೂಲ್ ಮಾಡಲು ಆಗೋದಿಲ್ಲ ಎಂಬ ಉದ್ದೇಶದಿಂದ ಗಾಂಜಾ ಪೂರೈಕೆದಾರರ ಹಿಡಿಯುವ ಮೂಲಕ ಗಾಂಜಾ ಮಾಫಿಯಾಕ್ಕೆ ಬರೆ ಎಳೆಯಲಾಗುತ್ತದೆ. ದೇವಸ್ಥಾನಗಳಲ್ಲಿ ನಡೆಯುತ್ತಿರುವ ಕಳ್ಳತನ ಹಿಂದೆ ಗ್ಯಾಂಗ್ ಇದ್ದು, ಅವರ ಚಲನವಲನದ ಮೇಲೆ ಕಣ್ಣಿಡಲಾಗಿದ್ದು, ಕಳ್ಳರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಏನು ಮಾಡುತ್ತೇನೆ ಎಂದು ಹೇಳೋದಕ್ಕಿಂತ ಮಾಡಿತೋರಿಸುವುದೇ ಮುಖ್ಯ ಉದ್ದೇಶ. ನನ್ನ ಅಧಿಕಾರ ಅವಧಿಯಲ್ಲಿ ಜನ ನೆನಪಲ್ಲಿ ಇಡುವಂತೆ ಪೊಲೀಸ್ ವ್ಯಸವ್ಥೆ ಬದಲಾಯಿಸಲಾಗುತ್ತದೆ ಎಂದು ತಿಳಿಸಿದರು.

ನಾನು ಹೇಳೋದಿಲ್ಲ, ಮಾಡಿ ತೋರಿಸುತ್ತೇನೆ: 
ದೇವಸ್ಥಾನ ಕಳ್ಳತನ ಹಾಗೂ ಇನ್ನಿತರ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬಂದು ಮೂರು ತಿಂಗಳು ಕಳೆದಿದೆ. ಎಲ್ಲದರ ಬಗ್ಗೆ ಕೂಲಂಕುಷ ಅಧ್ಯನ ನಡೆಸುತ್ತಿದ್ದೇನೆ. ಈಗ ಏನು ಹೇಳುವುದಿಲ್ಲ, ಎಲ್ಲವೂ ಮಾಡಿ ತೋರಿಸುತ್ತೇನೆ. ಬೆಂಗಳೂರಿನಲ್ಲಿದ್ದ ಸಂದರ್ಭದಲ್ಲಿ ಕ್ರೈ ವಿಭಾಗದಲ್ಲಿ ಕೆಲಸ ಮಾಡಿರುವ ಅನುಭವವಿದ್ದು ಅದರ ಆಧಾರದಲ್ಲಿಯೇ ಮಾತನಾಡುತ್ತಿದ್ದೇನೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕಡ್ಲೂರು, ಹಳ್ಳಾಡಿಗೆ ಭೇಟಿ:
ಕಂಡ್ಲೂರು ಹಳ್ಳಾಡು ಭೇಟಿ ಸಂದರ್ಭದಲ್ಲಿ ಕುಂದಾಪುರ ತರಸೀಲ್ದಾರ್ ಜಿ.ಎಂ.ಬೋರ್ಕರ್, ಗಣಿ ಮತ್ತು ಭೂವಿಜ್ಞಾ ಇಲಾಕೆ ಅಧಿಕಾರಿ ಕೋದಂಡರಾಮಯ್ಯ, ಡಾ.ಹಮೇಶ್ ಪ್ರಸಾದ್, ಮಹೇಶ್ ಅವರು ಪಶ್ಚಿಮ ವಲಯ ಪೊಲೀಸ್ ಮಹಾನಿರ್ದೇಶಕ ಹರಿಶೇಖರನ್ ಅವರಿಗೆ ಮಾಹಿತಿ ನಿಡಿದರು.

ಉಡುಪಿ ಜಿಲ್ಲಾ ಎಸ್ಪಿ ಬಾಲಕೃಷ್ಣ, ಕುಂದಾಪುರ ಡಿವೈಎಸ್ಪಿ ಪ್ರವೀಣ್ ಹೆಚ್.ನಾಯ್ಕ್, ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ರಾಘವ ಪಡೀಲ್, ಕುಂದಾಪುರ ಪಿಎಸ್ಸೈ ನಾಸೀರ್ ಹುಸೇನ್, ಬೈಂದೂರು ಪಿಎಸ್‌ಐ ಸಂತೋಷ್ ಕಾಯ್ಕಿಣಿ ಇದ್ದರು.

Exit mobile version