Kundapra.com ಕುಂದಾಪ್ರ ಡಾಟ್ ಕಾಂ

ವಾಟ್ಸಾಪ್‍ನಲ್ಲಿ ಉಚಿತವಾಗಿ ಕಾಲ್ ಮಾಡಬಹುದು

ಆಂಡ್ರಾಯ್ಡ್ ಸ್ಮಾರ್ಟ್‍ಫೋನ್‍ಲ್ಲಿ ವಾಟ್ಸಾಪ್ ಬಳಸುತ್ತಿರುವ ಬಳಕೆದಾರರಿಗೆ ಗುಡ್‍ನ್ಯೂಸ್. ಇನ್ನು ಮುಂಚಿನ ನೀವು ವಾಟ್ಸಾಪ್ ಸ್ನೇಹಿತರಿಗೆ ವಾಟ್ಸಾಪ್‍ನಿಂದಲೇ ಕರೆ ಮಾಡಬಹುದು.

ವಾಟ್ಸಾಪ್ ತನ್ನ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಏಪ್ರಿಲ್ 1ರಿಂದ ಕರೆ ಸೌಲಭ್ಯವನ್ನು ನೀಡಿದೆ. ಕರೆ ಮಾಡಲು ಗೂಗಲ್ ಪ್ಲೇಸ್ಟೋರ್‍ಗೆ ಹೋಗಿ ಹೊಸದಾಗಿ ಬಿಡುಗಡೆಯಾಗಿರುವ ವಾಟ್ಸಪ್ ಆವೃತ್ತಿಯನ್ನು ಅಪ್‍ಡೇಟ್ ಮಾಡಿಕೊಳ್ಳಬೇಕು. ಒಂದು ವೇಳೆ ಪ್ಲೇ ಸ್ಟೋರ್ ನಿಂದ ಅಪ್ ಡೇಟ್ ಆಗದಿದ್ದರೆ ವೆಬ್‍ಸೈಟ್‍ನಿಂದಲೇ ನೇರವಾಗಿ ಆಪ್ ಡೌನ್‍ಲೋಡ್ ಮಾಡಿ ಇನ್‍ಸ್ಟಾಲ್ ಮಾಡಿಕೊಂಡು ಕರೆ ಮಾಡಬಹುದು.

ಒಂದು ನಿಮಿಷದ ವಾಟ್ಸಾಪ್ ಕರೆಗೆ 3ಜಿ ಯಲ್ಲಿ 0.15 ಎಂಬಿ ಯಿಂದ 0.2ಎಂಬಿ ಖರ್ಚಾಗುತ್ತದೆ. ಹೀಗಾಗಿ 3ಜಿ ಇಂಟರ್‍ನೆಟ್ ಪ್ಯಾಕ್‍ನಲ್ಲಿ 1 ಎಂಬಿ ಒಳಗಡೆ 5 ನಿಮಿಷದ ಕರೆ ಮಾಡಬಹುದು.

2ಜಿ ಇಂಟರ್‍ನೆಟ್‍ನಲ್ಲೂ ನೀವು ಕರೆ ಮಾಡಬಹುದು. ಆದರೆ 3ಜಿಯಷ್ಟು ಸುಲಲಿತವಾಗಿ ಕರೆ ಮಾಡಲು ಸಾಧ್ಯವಿಲ್ಲ. ವಿಶೇಷ ಏನೆಂದರೆ 3ಜಿಗಿಂತಲೂ 2ಜಿ ಯಲ್ಲಿ ಹೆಚ್ಚಿನ ಎಂಬಿ ಖರ್ಚಾಗುತ್ತದೆ. 1 ನಿಮಿಷದ ಕರೆ ಮಾಡಲು 2ಜಿಯಲ್ಲಿ 0.35 ಎಂಬಿ ಖರ್ಚಾಗುತ್ತದೆ. ಇಬ್ಬರು 3ಜಿ ಬಳಕೆದಾರರು ಕರೆ ಮಾಡಿದರೆ ಧ್ವನಿ ಇಬ್ಬರಿಗೂ ಕೇಳುತ್ತದೆ. ಆದರೆ 2ಜಿ ಬಳಕೆದಾರು ಕರೆ ಮಾಡಿದ್ದಲ್ಲಿ ಧ್ವನಿ ಸ್ಪಷ್ಟವಾಗಿ ಕೇಳುವುದಿಲ್ಲ.
ಐಓಎಸ್ ಮತ್ತು ವಿಂಡೋಸ್ ಓಎಸ್ ಹೊಂದಿರುವ ಸ್ಮಾರ್ಟ್‍ಫೋನ್ ಗ್ರಾಹಕರಿಗೆ ಮುಂದೆ ಕರೆ ವಿಶೇಷತೆ ಮುಂದಿನ ದಿನಗಳಲ್ಲಿ ಸಿಗಲಿದೆ.

Exit mobile version