ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕೊಲ್ಲೂರಿಗೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿಯು ವೋಲ್ವೊ ಬಸ್ ಸೇವೆಯನ್ನು ಆರಂಭಿಸಿದೆ.
ಪ್ರತಿದಿನ ಬೆಂಗಳೂರಿನಿಂದ ಶಿವಮೊಗ್ಗ, ಹೊಸನಗರ ಮಾರ್ಗವಾಗಿ ರಾಜಹಂಸ ಬಸ್ ಓಡಿಸಲಾಗುತ್ತಿದೆ. ಇದಲ್ಲದೇ ಮೂರ್ನಾಲ್ಕು ಕರ್ನಾಟಕ ಸಾರಿಗೆ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಹವಾನಿಯಂತ್ರಿತ ರಹಿತ ಸ್ಲೀಪರ್ ಬಸ್‌ಗೆ ಬೇಡಿಕೆ ಇಲ್ಲದ ಕಾರಣ, ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರಿನಿಂದ ಕೊಲ್ಲೂರಿಗೆ ಇದೇ ಮೊದಲ ಬಾರಿಗೆ ಕಾರ್ಯಾಚರಣೆಗೊಳಿಸುತ್ತಿರುವ ವೋಲ್ವೊ ಬಸ್ ಧರ್ಮಸ್ಥಳ, ಮೂಡಬಿದರೆ, ಕಾರ್ಕಳ, ಹೆಬ್ರಿ, ಹಾಲಾಡಿ ಮಾರ್ಗವಾಗಿ ಸಂಚರಿಸಲಿದೆ. ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಡುವ ಬಸ್ ಮರುದಿನ ಬೆಳಗ್ಗೆ 9.15ಕ್ಕೆ ಕೊಲ್ಲೂರು ತಲುಪಲಿದೆ. ಹಾಗೆಯೇ, ಅಲ್ಲಿಂದ ರಾತ್ರಿ 7.45ಕ್ಕೆ ಹೊರಟು ಮುಂಜಾನೆ 5.30ಕ್ಕೆ ಬೆಂಗಳೂರಿಗೆ ಬರಲಿದೆ. ಪ್ರಯಾಣ ದರವು 850 ರೂ. ಎಂದು ನಿಗದಿಪಡಿಸಲಾಗಿದೆ.