Kundapra.com ಕುಂದಾಪ್ರ ಡಾಟ್ ಕಾಂ

ತೆಕ್ಕಟ್ಟೆ: ಭಾರತ ಸೇವೆಗಾಗಿ ಯೋಧರನ್ನು ನೀಡಿದ ಭೂಮಿ ಧನ್ಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ತೆಕ್ಕಟ್ಟೆ: ಈ ದೇಶದಲ್ಲಿ ಹೊಟ್ಟೆ ಹಸಿದವನಿಗೆ ಊಟ ಹಾಕುವ ಪದ್ಧತಿಯ ಬದಲು ಹೊಟ್ಟೆ ತುಂಬಿದವರಿಗೆ ಊಟ ಹಾಕುವ ಪ್ರವೃತ್ತಿ ಈ ಸಮಾಜದಲ್ಲಿದೆ. ಹೊಟ್ಟೆ ಹಸಿದವನಿಗೆ ಊಟ ಹಾಕುವ ಪದ್ಧತಿಯಂತೆ ಇಲ್ಲಿನ ಯುವ ಸಮುದಾಯ ನಿಜವಾಗಿಯೂ ಒಂದು ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಗ್ರಾಮದ ಯೋಧರನ್ನು ಭಾರತ ಸೇವೆಗಾಗಿ ಈ ಭೂಮಿ ಕೊಟ್ಟಿದೆ ಅದು ಈ ಭೂಮಿಯ ಧನ್ಯತೆ ಎಂದು ಕುಂದಾಪುರ ಪೊಲೀಸ್‌ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್‌. ಹೇಳಿದರು.

ಅವರು ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಮತ್ತು ಪರಿವಾರ ದೈವಗಳ ದೈವಸ್ಥಾನ ಇದರ ದಶಮಾನೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಸೇವೆಯಲ್ಲಿರುವ ಯೋಧರನ್ನು ಗುರುತಿಸುವ ಸಲುವಾಗಿ ನಡೆದ ಸೇನಾ ಸತ್ಕಾರ -2017 ಉದ್ದೇಶಿಸಿ ಮಾತನಾಡಿದರು.
ಸೈನಿಕರಿಗೆ ಸಮ್ಮಾನ ಮಾಡುವ ಸುಯೋಗ ಒದಗಿ ಬಂದಿರುವುದೇ ತನ್ನ ಭಾಗ್ಯ. ಇಲ್ಲಿನ ಯುವಕರು ಬಹಳ ವಿಚಾರವಂತರಾಗಿದ್ದು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾದ ಗೌರವವನ್ನು ತಂದುಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಿ ಸ್ವತ್ಛ ಪರಿಸರ ಹಾಗೂ ಸ್ವಸ್ಥ ಸಮಾಜವಿರುವುದೋ ಅಲ್ಲಿ ನೆಮ್ಮದಿ ಇರುತ್ತದೆ. ಅದರಂತೆ ಯುವಕರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವದ ಉತ್ತಮ ನಾಗರಿಕರನ್ನು ಸೃಷ್ಟಿಸುವಂತಹ ವಾತಾವರಣ ನಿರ್ಮಾಣವಾಗಬೇಕು. ಯುವಕರು ಮಾದಕ ವ್ಯಸನಕ್ಕೆ ಬಲಿ ಬೀಳದಂತೆ ಜಾಗೃತಿ ಮೂಡಿಸಿ ಧಾರ್ಮಿಕ ಮನೋಭಾವನೆ ಬೆಳೆಸಿದಾಗ ಮಾತ್ರ ಆತ್ಮಶುದ್ಧಿ ಹಾಗೂ ಕೆಟ್ಟ ಭಾವನೆಗಳು ದೂರವಾಗುವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ತೆಕ್ಕಟ್ಟೆ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಸಾಂಕೇತಿಕವಾಗಿ ಗಿಡವನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭ ಕುಂದಾಪುರ ಪೊಲೀಸ್‌ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್‌. ಅವರು ನಮ್ಮ ದೇಶ ಸೇವೆಯಲ್ಲಿರುವ ಗ್ರಾಮದ ವೀರ ಯೋಧ ನಿವೃತ್ತ ಯೋಧ ಶಿವರಾಮ ಶೆಟ್ಟಿ ತೆಕ್ಕಟ್ಟೆ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ರವಿ ಕಾಂಚನ್‌ ಕೊರವಡಿ, ನವೀನ್‌ ಪೂಜಾರಿ ಹೆಗ್ಗೂರುಬೆಟ್ಟು, ಪ್ರಭಾಕರ ಹರಪನಕೆರೆ, ರವಿ ಶೆಟ್ಟಿ ತೆಕ್ಕಟ್ಟೆ, ಸುಧಾಕರ ಹರಪನಕೆರೆ, ಅರುಣ್‌ ಕೊಮೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪವರ್‌ ಲಿಫ್ಟರ್‌ ನಿಖೀಲ್‌ ನಾಯಕ್‌ ಇವರನ್ನು ಗುರುತಿಸಿ ಸಮ್ಮಾನಿಸಿದರು ಮತ್ತು ಛತ್ತೀಸ್‌ಗಢದ ಸುಖಾ¾ ಜಿಲ್ಲೆಯಲ್ಲಿ ನಕ್ಸಲರ ಗುಂಡಿಗೆ ಬಲಿಯಾದ 26 ಸಿಆರ್‌ಪಿಎಫ್‌ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತೆಕ್ಕಟ್ಟೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಶೇಖರ್‌ ಕಾಂಚನ್‌ ಕೊಮೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಕಾರ್ಯಕ್ರಮದಲ್ಲಿ ಕುಂಭಾಶಿ ಗ್ರಾ. ಪಂ. ಅಧ್ಯಕ್ಷೆ ಶ್ರೀವಾಣಿ ಅಡಿಗ, ಮಾಜಿ ಜಿ.ಪಂ. ಸದಸ್ಯ ಗಣಪತಿ ಟಿ. ಶ್ರೀಯಾನ್‌, ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಇವರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ, ಕುಂಭಾಶಿ ಗ್ರಾಮ ಪಂಚಾಯತ್‌ ಸದಸ್ಯ ರಾಘವೇಂದ್ರ ಕಾಂಚನ್‌, ಗುರುರಾಜ, ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಫ್ರೆಂಡ್ಸ್‌ ಇದರ ಅಧ್ಯಕ್ಷ ಜಿ.ವಿ. ರಮೇಶ್‌ ಕಾಂಚನ್‌, ಕೊರವಡಿ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಫ್ರೆಂಡ್ಸ್‌ ಇದರ ಮಾಜಿ ಅಧ್ಯಕ್ಷರಾದ ಆನಂದ ಪೂಜಾರಿ, ಕರಿಯ ಪೂಜಾರಿ ಹಾಗೂ ಹೆಗ್ಗೂರುಬೆಟ್ಟು ಶ್ರೀ ನಂದಿಕೇಶ್ವರ ಫ್ರೆಂಡ್ಸ್‌ ಇದರ ಸರ್ವ ಸದಸ್ಯರು ಉಪಸ್ಥಿತರಿದ್ದರು.ಅರುಣ ಪೂಜಾರಿ ಸ್ವಾಗತಿಸಿ, ಶಿಕ್ಷಕ ಅಶೋಕ್‌ ತೆಕ್ಕಟ್ಟೆ ನಿರೂಪಿಸಿ, ಪ್ರಶಾಂತ್‌, ರವೀಶ್‌ ಕೊರವಡಿ ಕಾರ್ಯಕ್ರಮ ಸಂಘಟಿಸಿ, ಕೊಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಹರಪನಕೆರೆ ವಂದಿಸಿದರು.

Exit mobile version