ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉಪ್ಪುಂದ ಸರಕಾರಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿ ರಂಜಿತಾ 625 ಅಂಕಗಳಲ್ಲಿ 622 ಅಂಕಗಳನ್ನು ಪಡೆದು ಸಾಧನೆ ಮರೆದಿದ್ದಾಳೆ.
ಕನ್ನಡದಲ್ಲಿ 125, ಇಂಗ್ಲೀಷ್ 100, ಹಿಂದಿಯಲ್ಲಿ 99, ಗಣಿತ 100, ಸಮಾಜ ವಿಜ್ಷಾನ 99, ವಿಜ್ಞಾನ 99 ಅಂಕಗಳನ್ನು ಪಡೆದಿದ್ದಾರೆ. ಈಕೆ ಯಾವುದೇ ಕೋಚಿಂಗ್ ಹಾಗೂ ಟ್ಯೂಷನ್ ಪಡೆದಿಲ್ಲ ಬದಲಾಗಿ ಪ್ರತಿದಿನ ೪ರಿಂದ ೫ ಗಂಟೆ ಓದುವ ಹವ್ಯಾಸ ರೂಢಿಸಿಕೊಂಡಿದ್ದಾಳೆ.
ಸೆಂಟ್ರಿಂಗ್ ಕೆಲಸಗಾರ ತ್ರಾಸಿ ರಮೇಶ ಆಚಾರ್ಯ ಹಾಗೂ ಸಂಗೀತಾ ಆಚಾರ್ಯ ದಂಪತಿಯ ಪುತ್ರಿಯಾದ ಈಕೆ, ಉಪ್ಪುಂದದಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ನೆಲೆಸಿದ್ದಾಳೆ. ಶಿಕ್ಷಕರ ಹಾಗೂ ಪಾಲಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದ ಆಕೆ ಮುಂದೆ ಐಎಎಸ್ ಮಾಡುವ ಕನಸು ಹೊಂದಿದ್ದಾಳೆ.