Kundapra.com ಕುಂದಾಪ್ರ ಡಾಟ್ ಕಾಂ

ಪಿಯುಸಿ ಫಲಿತಾಂಶ: ಆಳ್ವಾಸ್ ಶೇ 98.66 ಸಾಧನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ರಾಜ್ಯದಲ್ಲಿ ಗರಿಷ್ಠ ಪಿಯುಸಿ ವಿದ್ಯಾರ್ಥಿಗಳನ್ನು ಹೊಂದಿರುವ ಹಿರಿಮೆಯ ಆಳ್ವಾಸ್ ಪದವಿ ಪೂರ್ವ ಕಾಲೇಜು ಸೇ 98.66 ಫಲಿತಾಂಶ ದಾಖಲಿಸಿದೆ. ಟಾಪ್ ಟೆನ್ ವಿದ್ಯಾಥರ್ಿಗಳ ಸಾಲಿನಲ್ಲಿ ಕಾಮಸರ್್ನ ಸ್ಪಂದನ (594) 2ನೇ ರ್ಯಾಂಕ್ ಸಹಿತ ಆಳ್ವಾಸ್ನ ಐದು ಮಂದಿ ವಿದ್ಯಾಥರ್ಿಗಳು ಸಾಧನೆ ಮೆರೆದಿದ್ದಾರೆ.

ಕಾಮಸರ್್ನ ಅನಿತಾ, ಸ್ವಾತಿ (ತಲಾ 593 ಅಂಕಗಳು) ವಿಜ್ಞಾನ ವಿಭಾಗದಲ್ಲಿ ನಿಹಾರಿಕಾ ಮತ್ತು ಮಹಾಗುಂಡಯ್ಯ ವಸ್ತದ (ತಲಾ 594)ಅಂಕಗಳೊಂದಿಗೆ ಟಾಪ್ಟೆನ್ನಲ್ಲಿ ಸ್ಥಾನ ಪಡೆದಿದ್ದಾರೆ.

ಒಟ್ಟು 5241 ವಿದ್ಯಾಥರ್ಿಗಳು ಪರೀಕ್ಷೆಗೆ ಹಾಜರಾಗಿ 5171 ಮಂದಿ ಉತೀರ್ಣರಾಗಿದ್ದು ಶೇ 98.66 ಫಲಿತಾಂಶ ಲಭಿಸಿದೆ. ಆಳ್ವಾಸ್ನಿಂದ 2193 ವಿದ್ಯಾಥರ್ಿಗಳು ಶೇ 85ಕ್ಕೂ ಹೆಚ್ಚಿನ ಫಲಿತಾಂಶ ಪಡೆದಿರುವುದು, 21 ಮಂದಿ 590ಕ್ಕೂ ಮಿಕ್ಕಿದ ಅಂಕಗಳನ್ನು ಗಳಿಸಿರುವುದು ಹಾಗೂ 417 ಮಂದಿ ವಿದ್ಯಾಥರ್ಿಗಳು ತಲಾ 570ಕ್ಕೂ ಅಧಿಕ ಅಂಕಗಳಿಸಿರುವುದು ದಾಖಲೆಯಾಗಿದೆ.

ಕಲಾ ವಿಭಾಗದಲ್ಲಿ ಅಂಧ ವಿದ್ಯಾರ್ಥಿ ಪ್ರಕಾಶ್ ಬಲಗಣ್ಣೂರು (553) ವಾಣಿಜ್ಯ ವಿಭಾಗದಲ್ಲಿ ಪೊಲೀಯೋ ಪೀಡಿತ ದೀಕ್ಷಿತ್ ಶೆಟ್ಟಿ(573) ಅಂಕಗಳನ್ನು ಪಡೆದಿರುವುದು ಶ್ರೇಷ್ಠ ಸಾಧನೆಯಾಗಿದೆ. ಫಿಸಿಕ್ಸ್ (181) ಗಣಿತ (152) ಸಂಖ್ಯಾಶಾಸ್ತ್ರ (95) ಗಣಕ ವಿಜ್ಞಾನ (95) ವ್ಯವಹಾರ ಅಧ್ಯಯನ (57) ಅಕೌಂಟೆನ್ಸಿ (74) ಬಯೋಲಜಿ(37) ಎಲೆಕ್ಟ್ರಾನಿಕ್ಸ್ (39) ಸಂಸ್ಕೃತ(16) ಬೇಸಿಕ್ ಮ್ಯಾತ್ಸ್( 14) ಕನ್ನಡ (5) ವಿಷಯಗಳಲ್ಲಿ ವಿದ್ಯಾಥರ್ಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.

ಕ್ರೀಡಾ ವಿಭಾಗದ 95ರ ಪೈಕಿ 90 ವಿದ್ಯಾರ್ಥಿಗಳು ಉತೀರ್ಣರಾಗಿದ್ದು ಹೈಜಂಪ್ನ ರಾಷ್ಟ್ರೀಯ ಕ್ರೀಡಾ ಪಟು ಅಭಿನಯ ಶೆಟ್ಟಿ (ಶೇ93.83) ರಾಜ್ಯಮಟ್ಟದ ಕ್ರೀಡಾಪಟು ಕಾಮಸರ್್ನ ನಿಶಿತ್ ಎನ್. ರಾವ್ (ಶೇ 93.83) ಉತ್ತಮ ಸಾಧನೆ ದಾಖಲಿಸಿದ್ದಾರೆ. ಆಳ್ವಾಸ್ನ ದತ್ತು ಸ್ವೀಕಾರ ಯೋಜನೆಯಡಿ ಪ್ರವೇಶ ಪಡೆದಿರುವ ವಿದ್ಯಾಥರ್ಿಗಳು ಹಾಗೂ ಒಟ್ಟಾರೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧನೆ ಮಾಡಿದ್ದಾರೆ ಎಂದು ಆಳ್ವಾಸ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Exit mobile version