Kundapra.com ಕುಂದಾಪ್ರ ಡಾಟ್ ಕಾಂ

ಆಳ್ವಾಸ್ ಕನ್ನಡ ಮಾಧ್ಯಮದಲ್ಲಿ ಶೇ.100, ಆಂಗ್ಲ ಮಾಧ್ಯಮದಲ್ಲಿ ಶೇ.99.15 ಫಲಿತಾಂಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಶಿಕ್ಷಣ ಇಲಾಖೆಯಿಂದ ರಾಜ್ಯದಲ್ಲಿಯೇ ನಂಬರ್ 1 ಕನ್ನಡ ಮಾಧ್ಯಮ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಸತತ 8ನೇ ಬಾರಿಗೆ 100% ಫಲಿತಾಂಶ ಬಂದಿದೆ. ಈ ಬಾರಿ 132 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ ಲಕ್ಷ್ಮೀ ಈಶ್ವರ ನಾಗಠಾಣೆ 621 ಅಂಕ ಪಡೆಯುವ ಮೂಲಕ ಗರಿಷ್ಠ ಅಂಕಗಳ ಸಾಧನೆ ಮಾಡಿದ್ದಾಳೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ತಿಳಿಸಿದ್ದಾರೆ.

625 ಅಂಕಗಳಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಒಟ್ಟು 35 ಮಂದಿ ವಿದ್ಯಾರ್ಥಿಗಳು ಪಡೆದಿರುವುದು ಸಂಸ್ಥೆಯ ಇನ್ನೊಂದು ಹೆಗ್ಗಳಿಕೆ. ನಂತರ ಅತ್ಯುನ್ನತ ಶ್ರೇಣಿಯಲ್ಲಿ 96 ವಿದ್ಯಾರ್ಥಿಗಳು (85% ಮೇಲ್ಪಟ್ಟು), ಪ್ರಥಮ ಶ್ರೇಣಿಯಲ್ಲಿ 32 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 4 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಕನ್ನಡದಲ್ಲಿ 14, ಹಿಂದಿ 36, ಸಂಸ್ಕøತ 5, ಗಣಿತ 4, ವಿಜ್ಞಾನ 4, ಸಮಾಜ ವಿಜ್ಞಾನ 9 ಹೀಗೆ ಒಟ್ಟು 72 ಮಂದಿ ವಿಷಯವಾರು 100ಕ್ಕೆ ನೂರು ಶೇಖಡಾ ಅಂಕಗಳನ್ನು ಪಡೆಯುವ ಮೂಲಕ ದಾಖಲೆಯ ಸಾಧನೆ ಮಾಡಿದ್ದಾರೆ.
ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 472 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, 99.15% ಫಲಿತಾಂಶ ಲಭ್ಯವಾಗಿದೆ. ಅದರಲ್ಲಿ ದೀಕ್ಷಾ ಎಂ.ಎನ್. (623), ಆಕಾಶ್ ಎಂ. ನಾಯರಿ (623), ವಿಶ್ಮಾ ಹೆಗಡೆ (622) ಹಾಗೂ ಅನ್ವೇಷ ಜೈನ್ (621) ಅಂಕಗಳನ್ನು ಪಡೆದಿದ್ದು, 625ರಲ್ಲಿ 600ಕ್ಕಿಂತ ಮೇಲ್ಪಟ್ಟು 28 ವಿದ್ಯಾರ್ಥಿಗಳು ಅಂಕ ಗಳಿಸಿದ್ದಾರೆ.

ಅತ್ಯುನ್ನತ ಶ್ರೇಣಿಯಲ್ಲಿ 190 ವಿದ್ಯಾರ್ಥಿಗಳು (85% ಮೇಲ್ಪಟ್ಟು), ಪ್ರಥಮ ಶ್ರೇಣಿಯಲ್ಲಿ 261 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕನ್ನಡದಲ್ಲಿ 11 ವಿದ್ಯಾರ್ಥಿಗಳು, ಇಂಗ್ಲೀಷ್ 7, ಹಿಂದಿ 16, ಸಂಸ್ಕøತ 1, ಗಣಿತ 9, ವಿಜ್ಞಾನ 4, ಸಮಾಜ ವಿಜ್ಞಾನ 9 – ಒಟ್ಟು 57 ವಿದ್ಯಾರ್ಥಿಗಳು ವಿಷಯವಾರು 100ರಲ್ಲಿ ನೂರು ಶೇಖಡಾ ಅಂಕಗಳ ಸಾಧನೆ ಮಾಡಿದ್ದಾರೆ.

ಉತ್ತಮ ಅಂಕಗಳನ್ನು ಗಳಿಸಿರುವ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಡಾ.ಎಂ. ಮೋಹನ ಆಳ್ವ, ಈ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸವನ್ನು ಆಳ್ವಾಸ್ ದತ್ತಿನಿಧಿ ಯೋಜನೆಯಡಿ ಉಚಿತ ಶಿಕ್ಷಣ ನೀಡಲಾಗುವುದು ಎಂದರು.

ಕ್ರೀಡಾ ವಿಭಾಗದ 57 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವ 33 ಮತ್ತು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವ 4 ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.

ಎಸ್‍ಸಿ-ಎಸ್‍ಟಿ ವರ್ಗಕ್ಕೆ ಸೇರಿದ ಶಿಲ್ಪಾ (606) ಮತ್ತು ಪ್ರಜ್ವಲ್ (602) ಅಂಕಗಳನ್ನು ಗಳಿಸುವ ಮೂಲಕ ಉತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ

Exit mobile version