Kundapra.com ಕುಂದಾಪ್ರ ಡಾಟ್ ಕಾಂ

ಜಿಎಸ್‌ಬಿ ಕ್ರಿಕೆಟ್ ಪಂದ್ಯಾಟ: ಉಡುಪಿ ಹರಿ ಓಂ ಎಸ್‌ಎಲ್‌ವಿಟಿಗೆ ಪೇಟೆ ಶ್ರೀ ವೆಂಕಟರಮಣ ಟ್ರೋಫಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಟೀಮ್ ಜಿಎಸ್‌ಬಿ ಕುಂದಾಪುರದ ಆಶ್ರಯದಲ್ಲಿ ಪೇಟೆ ಶ್ರೀ ವೆಂಕಟರಮಣ ಟ್ರೋಫಿ-2017 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ಸಂಭ್ರಮದಿಂದ ನಡೆಯಿತು.

ಪುರುಷರ ವಿಭಾಗದಲ್ಲಿ ಹರಿ ಓಂ ಎಸ್‌ಎಲ್‌ವಿಟಿ ಉಡುಪಿ ಪ್ರಥಮ, ಶ್ರೀ ರಾಮ ಸೂಪರ್‌ಕಿಂಗ್ಸ್ ಕೆಸರಗದ್ದೆ ದ್ವಿತೀಯ, ಸ್ಪಾರ್ಕ್ ಎಸ್‌ಎಲ್‌ವಿಟಿ ಉಡುಪಿ ತೃತೀಯ, ಹರಿ ಓಂ ಗಂಗೊಳ್ಳಿ ಚತುರ್ಥ ಸ್ಥಾನವನ್ನು ಪಡೆದುಕೊಂಡರು. ಉತ್ತಮ ಬ್ಯಾಟ್ಸ್‌ಮೆನ್ ಬಹುಮಾನವನ್ನು ಶ್ರೀ ರಾಮ

ಸೂಪರ್‌ಕಿಂಗ್ಸ್ ಕೆಸರಗದ್ದೆ ತಂಡದ ಬಾಲ ನಾಯಕ್, ಉತ್ತಮ ಎಸೆತಗಾರ ಬಹುಮಾನವನ್ನು ಕಟಪಾಡಿಯ ಹರಿ ಓಂ ತಂಡದ ಶರತ್ ಪ್ರಭು, ಉತ್ತಮ ಕೀಪರ್ ಆಗಿ ಸತೀಶ್ ಕಾಮತ್ ಬಹುಮಾನ ಸ್ವೀಕರಿಸಿದರು. ಮ್ಯಾನ್ ಆಫ್ ದಿ ಸೀರಿಸ್‌ನ್ನು ನಾಗೇಶ್ ಪೈ ತನ್ನದಾಗಿಸಿಕೊಂಡರು.

ಉದ್ಘಾಟನೆ: ಪಂದ್ಯಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕುಂದಾಪುರ ವೆಂಕಟರಮಣ ದೇವ ಎಜುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಧಕೃಷ್ಣ ಶೆಣೈ ವಹಿಸಿದ್ದು, ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ. ಮೋಹನದಾಸ ಶೆಣೈ ಉದ್ಘಾಟಿಸಿದರು. ಈ ಸಂದರ್ಭದಲಲಿ ಎ. ಸುರಭಿ ವಿ. ಪೈ, ವಿವೇಕ ಪೈ, ಕೃಷ್ಣ ಪೈ, ಕೆ. ಪದ್ಮನಾಭ ಶೆಣೈ, ವಿನಾಯಕ ಪೈ ಇನ್ನಿತರರು ಉಪಸ್ಥಿತರಿದ್ದರು.

ಸಮಾರೋಪ: ಅಮಾರೋಪ ಸಮಾರಂಬದ ಅಧ್ಯಕ್ಷತೆಯನ್ನು ಕುಂದಾಪುರ ವೆಂಕಟರಮಣ ದೇವ ಎಜುಕೇಶನಲ್ ಎಂಡ್ ಕಲ್ಚರಲ್ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರಾಧಕೃಷ್ಣ ಶೆಣೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಡಿ. ಗೋಪಿನಾಥ ಕಾಮತ್, ಬೆಳ್ವೆ ಸತೀಶ್ ಕಿಣಿ, ರಾಮಕೃಷ್ಣ ಮೋಹನ್ ಕಾಮತ್, ವೇ.ಮೂ. ತಾರನಾಥ ಭಟ್, ಕೆ. ಪದ್ಮನಾಭ ಶೆಣೈ, ಕೆ. ರಾಜೇಶ್ ನಾಯಕ್, ಪ್ರಸನ್ನ ಪ್ರಭು, ವಿನಾಯಕ ಪೈ ಇನ್ನಿತರರು ಉಪಸ್ಥಿತರಿದ್ದರು.

 

Exit mobile version