Site icon Kundapra.com ಕುಂದಾಪ್ರ ಡಾಟ್ ಕಾಂ

ಬಾಹುಬಲಿ ಸಿನೆಮಾ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಕೊಲ್ಲೂರು ದೇವಳಕ್ಕೆ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬಹುಭಾಷಾ ನಟಿ, ಬಾಹುಬಲಿ ಸಿನೆಮಾ ಖ್ಯಾತಿಯ ಅನುಷ್ಕಾ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ಕುಟುಂಬಿಕರೊಂದಿಗೆ ಭೇಟಿ ನೀಡಿದ ಅನುಷ್ಕಾ ಶೆಟ್ಟಿ, ಮೂಕಾಂಬಿಕೆ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಮತ್ತವರ ಕುಟುಂಬಿಕರು ಜೊತೆಗಿದ್ದರು. ದೇವರ ದರ್ಶನ ಪಡೆಯಲು ನಟಿ ಅನುಷ್ಕಾ ಶೆಟ್ಟಿ ಸಾರ್ವಜನಿಕರ ಜೊತೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದದ್ದು ವಿಶೇಷವಾಗಿತ್ತು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ಶೆಟ್ಟಿ, ಇಒ ಕೃಷ್ಣಮೂರ್ತಿ ಅನುಷ್ಠಾ ಶೆಟ್ಟಿ ಹಾಗೂ ಮುತ್ತಪ್ಪ ರೈ ಅವರನ್ನು ಗೌರವಿಸಿದರು.

 

Exit mobile version