Kundapra.com ಕುಂದಾಪ್ರ ಡಾಟ್ ಕಾಂ

ಭಟ್ಕಳ: ಭೀಕರ ಅಪಘಾತದಲ್ಲಿ ಮದುಮಗಳು ಸೇರಿ 8 ಮಂದಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಭಟ್ಕಳ: ತಾಲೂಕಿನ ಅನಂತವಾಡಿ ಸಮೀಪ ರಾ.ಹೆ 66ರಲ್ಲಿ ಬೆಳಿಗ್ಗೆ ಖಾಸಗಿ ಬಸ್ ಹಾಗೂ ಟೆಂಪೋ ನಡುವಿನ ನಡೆದ ಭೀಕರ ಅಪಘಾತದಲ್ಲಿ ಮದುಮಗಳು ಸೇರಿದಂತೆ 7 ಮಂದಿ ದಾರುಣವಾಗಿ ಸಾವನ್ನಪ್ಪಿ, 25ಕ್ಕೂ ಅಧಿಕ ಮಂದಿಗೆ ಗಾಯಗಳಾದ ಘಟನೆ ವರದಿಯಾಗಿದೆ. ಮೃತರನ್ನು ಮಧುಮಗಳು ದಿವ್ಯಾ ಕುರ್ಡೇಕರ್ (35), ಪಾಲಾಕ್ಷಿ (42), ಬೇಬಿ (38), ಸುಬ್ರಹ್ಮಣ್ಯ (15), ಖಾಸಗಿ ಬಸ್ ಚಾಲಕ ವಾಲ್ಮೀಕಿ (35), ಟೆಂಪೋ ಚಾಲಕ ನಾಗಪ್ಪ ಗಣಿಗಾರ್ (48) ಎಂದು ಗುರುತಿಸಲಾಗಿದೆ.

ಸಿರಸಿ-ಧಾರವಾಡದಿಂದ ಮದುವೆಯ ನಿಮಿತ್ತ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ ಹೊನ್ನಾವರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಅನಂತವಾಡಿ ಬಳಿ ಮುಖಮುಖಿ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಟೆಂಪೋ ಮಗುಚಿ ಬಿದ್ದಿದ್ದು ಬಸ್ಸಿನ ಮುಂಭಾಗ ನಚ್ಚುಗುಜ್ಜಾಗಿದೆ. ಗಾಯಾಳುಗಳನ್ನು ಭಟ್ಕಳ, ಮುರ್ಡೇಶ್ವರ, ಕುಂದಾಪುರ ಹಾಗೂ ಮಣಿಪಾಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಹಾಗೂ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version