Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್: ಮನೆ ಹಸ್ತಾಂತರ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ಇದರ ಶ್ರೀರಾಮ ಗೃಹ ನಿರ್ಮಾಣ ಯೋಜನೆಯ ಐದನೇ ಮನೆಯನ್ನು ಬೈಂದೂರು-ಬಾಡ ನಿವಾಸಿ ಗಿರಿಜಾ ಸುಬ್ರಾಯ ಶೇರೆಗಾರ್ ಇವರಿಗೆ ಆಡಳಿತ ಟ್ರಸ್ಟಿ ಬಿ ರಾಮಕೃಷ್ಣ ಶೇರೆಗಾರ್ ಭಾನುವಾರ ಹಸ್ತಾಂತರಿಸಿದರು.

ಈ ಸಂದರ್ಭ ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಬಿ. ಗೋಪಾಲ ನಾಯ್ಕ್, ಟ್ರಸ್ಟಿಗಳಾದ ಜಯಾನಂದ ಹೋಬಳಿದಾರ್, ಕೆ. ಜಿ. ನಾಗಪ್ಪ ಶೇರುಗಾರ್, ಅಶೋಕ ಕುಮಾರ್ ಬಾಡ, ಬಿ. ಶ್ರೀಧರ್, ಶಶಿಧರ ನಾಯಕ್, ವೆಂಕಟರಮಣ ಬಿಜೂರು, ನಾಗರಾಜ ಬಿ., ಸೀತಾ ಶ್ರೀನಿವಾಸ, ಬಿ. ಶ್ರೀನಿವಾಸ ಶೇರುಗಾರ್, ಎನ್. ವಿಶ್ವೇಶ್ವರ, ಸುಧಾಕರ ಹೊಸಾಡು, ಸಂಚಾಲಕರಾದ ಆನಂದ ಮದ್ದೋಡಿ, ಕೇಶವ ನಾಯಕ್ ಬಿಜೂರು, ವೆಂಕಟರಮಣ ಟಿ., ಕುಂದಾಪುರ ಶ್ರೀರಕ್ಷಾ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ರಾಧಾಕೃಷ್ಣ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

 

Exit mobile version