ಕುಂದಾಪ್ರ ಡಾಟ್ ಕಾಂ ಸುದ್ದಿ
ಉಪ್ಪುಂದ: ಅಂಬಾಗಿಲು ಶ್ರೀ ಅಶ್ವತ ನಾರಾಯಣ ಮೂಡುಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಅಂಗಾರಕ ಸಂಕಷ್ಟಿಯ ವಿಶೇಷ ದಿನದಂದು ರಾತ್ರಿ ದೇವರಿಗೆ ತೊಟ್ಟಿಲೋತ್ಸವ ಸೇವೆಯು ಯು. ಗಣೇಶ ಅವಧಾನಿ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಿತು. ಸೇವಾದಾರರಾದ ಶ್ರೀಮತಿ ಸಿಯಾ ಲಲಿತ ಕಾಮತ ಯು.ಎಸ್.ಎ. ಕುಟುಂಬಸ್ಥರು ಹಾಗೂ ಸಾವಿರಾರು ಭಕ್ತಮಹಾಶಯರು ಶ್ರೀ ದೇವರ ದರುಶನ ಪಡೆದು ಪ್ರಸಾದವನ್ನು ಸ್ವೀಕರಿಸಿ ಪುನೀತರಾದರು.