ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದ, ಸಂಗೀತಗಾರ ಗಂಗೊಳ್ಳಿ ಪ್ರಕಾಶ್ ಶೆಣೈಯವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ಖ್ಯಾತ ಗಿಂಡಿ ನರ್ತನ ಕಲಾವಿದ ಗುಡ್ಡೆಯಂಗಡಿ ಸತೀಶ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಲ್ಲೂರು ನಾರಾಯಣ ವಿಕಲ ಚೇತನ ಮಕ್ಕಳ ಶಾಲೆ ರೂವಾರಿ ತಲ್ಲೂರು ಸುರೇಶ್ ರವರು ಭಾಗವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ ಕೊಗ್ಗ ಕಾಮತ್ ವಂದಿಸಿದರು. ಅನಂತರ ಪ್ರಕಾಶ್ ಶೆಣೈ ಗಂಗೊಳ್ಳಿ ಹಾಗೂ ಬಳಗದವರಿಂದ ಗಾನಸುಧಾ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಇದೇ ಸಂದರ್ಭದಲ್ಲಿ ತಲ್ಲೂರು ವಿಠ್ಠಲ ಭಜನಾ ಮಂಡಳಿ ಸದಸ್ಯರಾದ ಮಮತಾ ಪ್ರಭು, ದೇವಕಿ ಪ್ರಭು, ರಜನಿ ಪ್ರಭು ಇನ್ನಿತರರಿಂದ ಭಜನಾ ಸಂಗೀತ ನಡೆಯಿತು. ಅಕಾಡೆಮಿ ಬಳಗದ ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಹಿಸಿದರು.