Site icon Kundapra.com ಕುಂದಾಪ್ರ ಡಾಟ್ ಕಾಂ

ದ್ವಿತೀಯ ಪಿಯುಸಿ ಪ್ರಥಮ ರ‍್ಯಾಂಕ್ ಪಡೆದ ರಾಧಿಕಾಗೆಎ ಲ್ಯಾಪ್‌ಟಾಪ್ ಕೊಡುಗೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ರಾಧಿಕಾ ಪೈ ಅವರನ್ನು ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆ ವತಿಯಿಂದ ಲ್ಯಾಪ್‌ಟಾಪ್ ಕೊಡುಗೆಯಾಗಿ ನೀಡಿ ಗೌರವಿಸಲಾಯಿತು.

ಗುರುವಾರ ರಾಧಿಕಾ ಪೈ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ ಹೆಗ್ಡೆ ಕೋಟತ್ತು ಗಂಗೊಳ್ಳಿ ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಅವರು ರಾಧಿಕಾ ಪೈ ಅವರಿಗೆ ಲ್ಯಾಪ್‌ಟಾಪ್‌ನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ಗಂಗೊಳ್ಳಿ ಜಿ.ಎಸ್.ವಿ.ಎಸ್ ಅಸೋಶಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ಸಂಚಾಲಕ ಎನ್.ಸದಾಶಿವ ನಾಯಕ್, ಜಿ.ಎಸ್.ಬಿ. ಹಿತರಕ್ಷಣಾ ವೇದಿಕೆಯ ಪ್ರಮುಖರಾದ ರಾಜಾರಾಮ ಪಡಿಯಾರ್ ಉಪ್ಪುಂದ, ಪ್ರಶಾಂತ ನಾಯಕ್ ಕೋಟ, ಕೆ.ರಾಮನಾಥ ನಾಯಕ್, ಎನ್.ಅಶ್ವಿನ್ ನಾಯಕ್, ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್, ಸ್ಥಳೀಯರಾದ ಕೆ.ಶಾಂತಾರಾಮ ನಾಯಕ್, ಎಂ.ಜಿ.ಸುರೇಶ ಭಂಡಾರ್‌ಕಾರ್, ಎಂ.ಮಾಧವ ಪೈ, ಮಾಯಾ ಎಂ.ಪೈ ಮತ್ತಿತರರು ಉಪಸ್ಥಿತರಿದ್ದರು.

 

Exit mobile version