Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಹೋಲಿ ರೋಜರಿ ಶಾಲೆ: ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

????????????????????????????????????

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದ ಹೋಲಿ ರೋಜರಿ ಶಾಲೆಯ ೨೦೧೭-೧೮ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ ಶುಕ್ರವಾರ ಶಾಲೆಯ ಸಭಾಭವನದಲ್ಲಿ ನಡೆಯಿತು.

ಸಮಾರಂಭವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಜಾದೂಗಾರ ಓಂಗಣೇಶ ಉಪ್ಪುಂದ ಅವರು ವಿದ್ಯಾರ್ಥಿ ಸಂಸತ್ತಿನ ಮಹತ್ವದ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರಮಾಣವಚನ ಬೋಧಿಸಿದರು. ಕುಂದಾಪುರ ವಲಯದ ಧರ್ಮಗುರು ರೆ.ಫಾ.ಅನಿಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೋಯ್ಸಲಿನ್ ಎ.ಸಿ. ಶುಭಾಶಂಸನೆಗೈದರು. ಸಹಶಿಕ್ಷಕಿಯರಾದ ರೇಣುಕಾ ಐತಾಳ್ ಮತ್ತು ನೀತಾ ಡಿ’ಸೋಜ ಕಾರ್ಯಕ್ರಮವನ್ನು ಸಂಘಟಿಸಿದ್ದರು.

ವಿದ್ಯಾರ್ಥಿ ಮುಖಂಡ ಶೋನ್ ಪಾವ್ಲ ಸ್ವಾಗತಿಸಿದರು. ವಿದ್ಯಾರ್ಥಿನಿ ರಿಶಿಕಾ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು. ಉಪಮುಖಂಡ ಸುಪ್ರೀತಾ ವಂದಿಸಿದರು.

Exit mobile version