Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು: ಪ್ರಧಾನಮಂತ್ರಿ ಉಜ್ವಲಾ ಹೊಸ ಅನಿಲ ಸಂಪರ್ಕ ಮೇಳ ಹಾಗೂ ಸುರಕ್ಷಿತಾ ಶಿಬಿರ ಉದ್ಘಾಟನೆ

ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯಿಂದ ಬದುಕು ಉಜ್ವಲ: ದೀಪಕ್‌ಕುಮಾರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರೋಟರಿ ಭವನದಲ್ಲಿ ಭಾರತ್ ಗ್ಯಾಸ್ ವಿತರಣ ಸಂಸ್ಥೆ ಶ್ರೀ ಶಾಂತೇರಿ ಕಾಮಾಕ್ಷಿ ಎಂಟರ್‌ಪ್ರೈಸೆಸ್ ಬೈಂದೂರು ಇವರ ಸಹಯೋಗದಲ್ಲಿ ಪ್ರಧಾನಮಂತ್ರಿ ಉಜ್ವಲಾ ಹೊಸ ಅನಿಲ ಸಂಪರ್ಕ ಮೇಳ ಹಾಗೂ ಸುರಕ್ಷಿತಾ ಶಿಬಿರ ಜರುಗಿತು.

ಶಿಬಿರವನ್ನು ಉದ್ಘಾಟಿಸಿದ ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ ಮಾತನಾಡಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲಾ ಯೋಜನೆ ಮಹತ್ವಾಕಾಂಕ್ಷಿ ಇದು ದೇಶದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಠಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮ ದೂರದೃಷ್ಠಿತ್ವದ ಚಿಂತನೆಗಳಿಂದ ಸ್ವಚ್ಛ ಇಂದನ-ಉತ್ತಮ ಜೀವನ ಎಂಬ ಯೋಜನೆ ಯಶಸ್ವಿಯಾಗಿ ಜಾರಿಗೊಳ್ಳುತ್ತಿದೆ. ದೇಶದ ಶ್ರೀಮಂತರು ಮೋದಿಯವರ ಮನವಿ ಮೇರೆಗೆ ಅಡುಗೆ ಅನಿಲದ ಸಬ್ಸಿಡಿಯನ್ನು ಹಿಂತಿರುಗಿಸಿವುದರಿಂದ ಬಡವರಿಗೆ ಉಚಿತವಾಗಿ ಸಂಪರ್ಕ ನೀಡಲು ಅನುಕೂಲವಾಗಿದೆ ಎಂದು ಹೇಳಿದರು.

ಕಳೆದ ಐವತ್ತು ವರ್ಷಗಳಿಂದಾಗದ ಕೆಲಸಗಳು ಈ ಮೂರು ವರ್ಷಗಳಿಂದಾಗುತ್ತಿದೆ. ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ದೇಶದ ಎಲ್ಲಾ ಬಡ, ಮಧ್ಯಮ ಜನರ ಮನೆಮನೆಗಳಿಗೆ ಉಜ್ವಲ ಸಂಪರ್ಕ ನೀಡಿದೆ. ಮಹಿಳೆಯರ ಅನುಕೂಲಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸರ್ಕಾರ ಹೊಗೆಮುಕ್ತ ಅಡುಗೆಮನೆಗೆ ಆದ್ಯತೆ ನೀಡಿದೆ. ಹಾಗೆಯೇ ಇನ್ನುಳಿದ ಎರಡು ವರ್ಷಗಳಲ್ಲಿ ಹೊಗೆಮುಕ್ತ ದೇಶವಾಗಲಿದೆ ಎಂದರು.

ಪಡುವರಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ ಅಧ್ಯಕ್ಷತೆವಹಿಸಿದ್ದರು. ಜಿಪಂ ಸದಸ್ಯ ಕೆ. ಬಾಬು ಶೆಟ್ಟಿ, ಕೊಲ್ಲೂರು ದೇವಳದ ಮಾಜಿ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬಿಪಿಸಿಎಲ್‌ನ ಮಂಗಳೂರು ವಿಭಾಗೀಯ ಅಧಿಕಾರಿ ಸಿ. ಟಿ. ವೇಣುಗೋಪಾಲ್, ಸೇಲ್ಸ್ ಮ್ಯಾನೇಜರ್ ಅರುಣ್ ಮೋಹನ್ ಉಪಸ್ಥಿತರಿದ್ದರು. ಶ್ರೀ ಶಾಂತೇರಿ ಕಾಮಾಕ್ಷಿ ಎಂಟರ್‌ಪ್ರೈಸೆಸ್‌ನ ಆಡಳಿತ ನಿರ್ದೇಶಕ ಕುಂಜಾಲು ವೆಂಕಟೇಶ ಕಿಣಿ ಸ್ವಾಗತಿಸಿ, ಪ್ರಾಸ್ತಾವಿಸಿದರು. ಉದಯ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ನಂತರ ನೂರಾರು ಮಹಿಳಾ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ವಿತರಿಸಲಾಯಿತು.

Exit mobile version