Site icon Kundapra.com ಕುಂದಾಪ್ರ ಡಾಟ್ ಕಾಂ

ಕೆ. ದಾಮೋದರ್ ಐತಾಳರಿಗೆ ಪತ್ರಿಕಾ ದಿನದ ಗೌರವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಹಿರಿಯ ಪತ್ರಕರ್ತ, ಉಡುಪಿ ಜಿಲ್ಲಾ ಕಾರ್ಯ ಪತ್ರಕರ್ತರ ಸಂಘದ ಪ್ರಥಮ ಅಧ್ಯಕ್ಷ, ಬಳಕೆದಾರರ ವೇದಿಕೆ ಸಂಚಾಲಕ ಕೆ.ದಾಮೋದರ ಐತಾಳರಿಗೆ ಪತ್ರಕರ್ತರ ವೇದಿಕೆ ನೀಡುವ ಪತ್ರಿಕಾ ದಿನದ ಗೌರವವನ್ನು ದಿನಾಚರಣೆಯ ಮುನ್ನಾ ದಿನ ಜೂನ್ ೩೦ ರಂದು ಅವರ ನಿವಾಸದಲ್ಲಿ ಮಧ್ಯಾಹ್ನ ೨.೦೦ ಗಂಟೆಗೆ ಪ್ರದಾನಿಸಲಾಗುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಗೌರವ ಪ್ರದಾನ ಮಾಡಲಿದ್ದಾರೆ., ನಾದವೈಭವಂ ಉಡುಪಿ ವಾಸುದೇವ ಭಟ್, ವಿಶ್ವ ತುಳುವೆರೆ ಆಯನೋದ ಪ್ರಧಾನ ಸಂಚಾಲಕ ಡಾ. ರಾಜೇಶ ಆಳ್ವ ಬದಿಯಡ್ಕ , ಮಾಧ್ಯಮ ಉಪನ್ಯಾಸಕ ಮಂಜಪ್ಪ ದ್ಯಾ ಗೋಣಿ ಸಹಿತ ಗಣ್ಯರು ಉಪಸ್ಥಿತರಿರುವರು.

ರಾಜೇಶ ಶಿಬಾಜೆ ಪ್ರಶಸ್ತಿ ಪುರಸ್ಕೃತ ಸುಭಾಶ್ಚಂದ್ರ ವಾಗ್ಳೆ ಅಭಿನಂದನೆಗೈಯುವರು. ವೇದಿಕೆಯ ಹಿರಿಯರೆಡೆಗೆ ನಮ್ಮ ನಡಿಗೆ ಧ್ಯೇಯದೊಂದಿಗೆ ಹತ್ತು ವರ್ಷಗಳಿಂದ ಕಾರ್ಯಕ್ರಮ ನಡೆಸುತ್ತಿದ್ದು ಅಂಬಾತನಯ ಮುದ್ರಾಡಿ, ವಿದ್ವಾನ್ ಬಿ.ಚಂದ್ರಯ್ಯ, ಉಮೇಶ ರಾವ್ ಎಕ್ಕಾರು, ರಾಘವ ನಂಬಿಯಾರ್, ಎ.ಎಸ್ ಎನ್ ಹೆಬ್ಬಾರ್, ಎಂ.ವಿ.ಕಾಮತ್, ಕು.ಗೋ, ನಾದವೈಭವಂ ಉಡುಪಿ ವಾಸುದೇವ ಭಟ್, ಮಲಾರ್ ಜಯರಾಮ ರೈ ಮೊದಲಾದವರನ್ನು ಅವರವರ ಗೃಹದಲ್ಲಿ ಸನ್ಮಾನಿಸಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ತಿಳಿಸಿದ್ದಾರೆ.

Exit mobile version