Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಶಾಲಾ ಮಕ್ಕಳಿಂದ ಸೀಡ್ ಬಾಲ್ ತಯಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿ ಗುರುಕುಲ ಶಾಲೆಯ ಮೊಂಟೆಸರಿ ಮಕ್ಕಳಿಗೋಸ್ಕರ ಬೀಜದ ಉಂಡೆ (ಸೀಡ್ ಬಾಲ್) ತಯಾರಿಕೆಯ ವಿಶೇಷ ಕಾರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ’ಪಾಠದ ಜೋತೆಗೆ ಆಟ, ಆಟದೊಂದಿಗೆ ಪಾಠ’ ಎಂಬ ವಿಶೇಷ ಯೋಜನೆಯೊಂದಕ್ಕೆ ಇಂದು ಮಕ್ಕಳು ಚಾಲನೆ ನೀಡಿದರು.

ಮೊದಲಿಗೆ ಕೆಂಪು ಮಣ್ಣಿಗೆ ನೀರನ್ನು ಸೇರಿಸಿ ಮಣ್ಣನ್ನು ಹದಗೊಳಿಸಿಕೊಳ್ಳಲಾಯಿತು. ನಂತರ ಮಕ್ಕಳನ್ನು ಸುತ್ತ ಕುಳ್ಳಿರಿಸಿ ಮಣ್ಣಿನ ಉಂಡೆಗಳನ್ನು ರಚಿಸುವಂತೆ ತಿಳಿಸಲಾಯಿತು. ತಮ್ಮ ಪುಟಾಣಿ ಕೈಗಳಿಂದ ವಿವಿಧ ಆಕಾರದ ಉಂಡೆಗಳನ್ನು ರಚಿಸಿ ಅದರ ಮಧ್ಯಭಾಗದಲ್ಲಿ ವಿವಿಧ ತರಕಾರಿ (ಬೆಂಡೆಕಾಯಿ, ಸೌತೆಕಾಯಿ, ಕುಂಬಳಕಾಯಿ ) ಬೀಜಗಳನ್ನು ಇಟ್ಟು ವೃತ್ತಾಕಾರದ ಉಂಡೆಗಳನ್ನು ರಚಿಸಲಾಯಿತು. ಈ ಕ್ರಿಯಾತ್ಮಕ ಚಟುವಟಿಕೆಯ ಜೊತೆಯಲ್ಲಿ ಇವುಗಳ ಮಹತ್ವವನ್ನು ಶಿಕ್ಷಕಿಯರು ಮಕ್ಕಳಿಗೆ ತಿಳಿಸಿದರು. ಮುಖ್ಯವಾಗಿ ಈ ಚಟುವಟಿಕೆಯಿಂದಾಗಿ ಪುಟಾಣಿಗಳ ಕೈಬೆರಳುಗಳಿಗೆ ಉತ್ತಮ ವ್ಯಾಯಾಮ ಸಿಕ್ಕಿದಂತಾಗುತ್ತದೆ. ಒಟ್ಟಿನಲ್ಲಿ ಬಹು ಉಪಯೋಗದ ಸೀಡ್ ಬಾಲ್ ತಯಾರಿಕೆಯನ್ನು ಮಾಡುವ ಮೂಲಕ ಪುಟಾಣಿಗಳು ಮತ್ತು ಶಿಕ್ಷಕಿಯರು ಆನಂದಿಸಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ನಿರ್ದೇಶಕಿ ಅನುಪಮಾ ಎಸ್.ಶೆಟ್ಟಿ, ಪ್ರಾಂಶುಪಾಲರಾದ ಸಾಯಿಜು ಕೆ. ಆರ್. ನಾಯರ್, ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ ಹಾಗು ಎಲ್ಲಾ ಶಿಕ್ಷಕಿಯರು ಉಪಸ್ಥಿತರಿದ್ದರು.

Exit mobile version