Kundapra.com ಕುಂದಾಪ್ರ ಡಾಟ್ ಕಾಂ

ಡಾ. ಬಿ. ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜು: ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಸ್ವಂತಿಕೆ ಹಾಗೂ ಅನನ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಯೋಚನೆಗಳ ಮೇಲೆ ಅನ್ಯ ಪ್ರಭಾವ ಜಾಸ್ತಿಯಾಗುತ್ತಿದೆ. ಪ್ರಭಾವಗಳಿಗೆ ಒಳಗಾಗಿ ವಿದ್ಯಾರ್ಥಿಗಳು ಬದುಕಿನ ನೈಜತೆಯನ್ನು ಕಳೆದುಕೊಳ್ಳಬಾರದು. ಎಲ್ಲವನ್ನು ಒಳಗೊಳ್ಳುತ್ತಾ ಒಡನಾಟದ ಮೂಲಕ ನಡೆಯುವ ಕಲಿಕೆಯೇ ದೊಡ್ಡ ಕಲಿಕೆ ಎಂದು ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕ ಉದಯ ಗಾಂವಕರ್ ಹೇಳಿದರು.

ಅವರುಕುಂದಾಪುರದಡಾ. ಬಿ. ಬಿ. ಹೆಗ್ಡೆ ಪ್ರಥಮದರ್ಜೆಕಾಲೇಜಿನ ೨೦೧೭-೧೮ನೇ ಶೈಕ್ಷಣಿಕ ಸಾಲಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿ ಮಾಹಿತಿಯನ್ನುಜ್ಞಾನಎಂದು ಪರಿಭಾವಿಸುತ್ತಾರೆ. ಮಾಹಿತಿಯೇ ಜ್ಞಾನವಲ್ಲ, ಜ್ಞಾನ ರಚನಾತ್ಮಕವಾಗಿದ್ದು, ಸ್ವಂತಿಕೆಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಒಳ್ಳೆದು ಕೆಟ್ಟದನ್ನು ಪರಾಮರ್ಶೆ ಮಾಡುವ ಮೂಲಕ ಮಾನವ ಪ್ರಜ್ಞೆ ಬೆಳೆಸಿಕೊಳ್ಳಿ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮಚಂದ್ರಶೇಖರ್‌ಅಧ್ಯಕ್ಷತೆ ವಹಿಸಿದ್ದರು. ವಿವಿಧ ವೇದಿಕೆಗಳ ಮುಖ್ಯ ಸಂಯೋಜಕ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಾಣಿಜ್ಯ ಉಪನ್ಯಾಸಕಿ ರಕ್ಷಾ ಎಸ್. ಶೆಟ್ಟಿ ವಿವಿಧ ವೇದಿಕೆಗಳ ಧ್ಯೆಯೋದ್ಧೇಶಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಪುಷ್ಪರಾಣಿ ಅತಿಥಿಗಳನ್ನು ಪರಿಚಯಿಸಿದರು. ದೀಕ್ಷಾ ಸ್ವಾಗತಿಸಿದರು. ಗೌತಮಿ ವಂದಿಸಿದರು, ವಿಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Exit mobile version