Site icon Kundapra.com ಕುಂದಾಪ್ರ ಡಾಟ್ ಕಾಂ

ಬವಳಾಡಿ: ಸ್ಥಳಿಯ ಯುವಕರಿಂದ ಶ್ರಮದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿಜೂರು ಗ್ರಾಮದ ಬವಳಾಡಿಯ ಸಮೀಪ ಹಾದು ಹೋಗುವ ರಸ್ತೆಯ ಮಾರ್ಗದಲ್ಲಿ ೧೦೦ ಮೀಟರ್ ದೂರದಷ್ಟು ಪೊದೆಗಳಿಂದ ರಸ್ತೆಯ ಅರ್ಧಭಾಗದಷ್ಟು ಸಂಪೂರ್ಣ ಮುಚ್ಚಿಹೊಗಿದ್ದು, ಇದರಿಂದ ಸಾರ್ವಜನಿಕರಿಗೆ ಸಂಚರಿಸಲು ತುಂಬ ಅನಾನೂಕುಲ ಮತ್ತು ಭಯದ ವಾತವರಣ ನಿರ್ಮಾಣವಾಗಿದನ್ನು ಮನಗೊಂಡು ಸ್ಥಳಿಯ ಸಂಘ ಸಂಸ್ಥೆಯಾದ ಶ್ರೀ ಸತ್ಯಸಾಯಿಬಾಬ ಸದಸ್ಯರು ಮತ್ತು ಊರಿನ ಗ್ರಾಮಸ್ಥರು ಒಂದು ದಿನ ಶ್ರಮದಾನ ನಡೆಸಿದರು.

ಶಿಕ್ಷಕ ಗಣೇಶ ಪೂಜಾರಿ ಶ್ರಮದಾನದ ನೇತೃತ್ವ ವಹಿಸಿದ್ದರು. ಶೇಖರ, ಮಂಜುಪೂಜಾರಿ, ಗೋಪಾಲ, ಗಣೇಶ, ಗೊವಿಂದ, ಉದಯ ಮೊದಲಾದ ಪ್ರಮುಖರು ಜೊತೆಗಿದ್ದರು.

Exit mobile version