Kundapra.com ಕುಂದಾಪ್ರ ಡಾಟ್ ಕಾಂ

ಭಾಗವತ ಹಾಲಾಡಿ ರಾಘವೇಂದ್ರ ಮಯ್ಯರಿಗೆ ಕಲಾಕ್ಷೇತ್ರದಲ್ಲಿ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಸುವರ್ಣ ಸಂಭ್ರಮದಲ್ಲಿರುವ ಶ್ರೀ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತ ಹಾಲಾಡಿ ರಾಘವೇಂದ್ರ ಮಯ್ಯ ಅವರನ್ನು ದಂಪತಿ ಸಹಿತ ಮಣೂರು ಮಯ್ಯ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾತ್ರಿ ಅದ್ದೂರಿಯಾಗಿ ಸನ್ಮಾನಿಸಲಾಯತು.

ರಾಘವೇಂದ್ರ ಮಯ್ಯರು ಊರಿಗೆ ತಮ್ಮ ಭಾಗವತಿಕೆಯ ಮೂಲಕ ಕೀರ್ತಿ ತಂದಿದ್ದಾರೆ. ಮೊದಲು ನಮ್ಮ ಹಾಲಾಡಿ ಭಜನೆ, ನಾಟಕ ಯಕ್ಷಗಾನ ಜಾನಪದ ನೃತ್ಯ ಕಲೆಗಳಿಗೆ ಹೇಳಿ ಮಾಡಿಸಿದಂತೆ ಇತ್ತು ಈಗ ಅದೆಲ್ಲಾ ಮಾಯವಾಗುತ್ತಿದೆ ಎಂದು ಅತಿಥಿ ಬೆಂಗಳೂರಿನ ಉದ್ಯಮಿ ಹಾಲಾಡಿ ಕುದ್ರುಮನೆ ಶ್ರೀನಿವಾಸ ಶೆಟ್ಟಿ ಅಭಿಪ್ರಾಯ ಪಟ್ಟರು.

ಮುಂದಿನ ತಿರುಗಾಟ ಸಾಲಿಗ್ರಾ,ಮ ಮೇಳದ 50 ನೇ ವರ್ಷ ಮತ್ತು ನನಗೂ ಈಗ 50. ಮೇಳದ ನಿತ್ಯ ಸಂಭ್ರಮಕ್ಕೆ ಎಲ್ಲರು ಆಶೀರ್ವಾದ ಮಾಡಿ ಎಂದು ಸನ್ಮಾನಕ್ಕೆ ಉತ್ತರಿಸಿದ ಮಯ್ಯ ಅಭಿಪ್ರಾಯ ಪಟ್ಟರು. ಸುದ್ದಿ ಟಿವಿ ಸಂಪಾದಕ ಶಶಿಧರ್ ಭಟ್, ಕಲಾವಿದ ಶಶಿಧರ ಕೋಟೆ, ನರಸಿಂಹ ಐತಾಳ್, ಸುಬ್ರಮಣ್ಯ ಮಿತ್ತಂತಾಯ, ವಾಸುದೇವ ಮಯ್ಯ, ಪುಷ್ಟ ಮಯ್ಯ, ರಾಧಾಕೃಷ್ಣ ಹೊಳ್ಳ, ಸುಬ್ರಮಣ್ಯ ಮಿತ್ತಂತಾಯ, ವೆಂಕಟೇಶ, ಪಲ್ಲವಿ ಮಯ್ಯ, ಮಂಜುನಾಥ ಮಯ್ಯ, ರಮೇಶ ಬೇಗಾರ್ ಮೊದಲಾದವರು ಉಪಸ್ಥಿತರಿದ್ದರು. ೨೫ ವರ್ಷಗಳ ಹಿಂದೆ ಯಕ್ಷಗಾನದಲ್ಲಿ ಹಾಡಿದ್ದ ಗೀತೆ ಬಾರಿಸು ಕನ್ನಡ ಡಿಂಡಿಮವ ಹಾಡನ್ನೇ ಶಶಿಧರ ಕೋಟೆ ಅಭಿನಂದನೆಗಾಗಿ ಹಾಡಿದ್ದು ಕಾಕತಾಳೀಯವಾದರೂ ಗಮನ ಸೆಳೆಯಿತು.

ಫೋಟೋ: ವಿಶ್ವನಾಥ ಕುಂದಾಪುರ

Exit mobile version