Kundapra.com ಕುಂದಾಪ್ರ ಡಾಟ್ ಕಾಂ

ಕಂಬಳ ಕ್ರೀಡೆಗೆ ಗ್ರೀನ್ ಸಿಗ್ನಲ್: ಕಂಬಳ ಪ್ರೇಮಿಗಳ ಹೋರಾಟಕ್ಕೆ ಗೆಲುವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರಾವಳಿ ಮಣ್ಣಿನ ಜಾನಪದ ಕ್ರೀಡೆ ಕಂಬಳಕ್ಕೆ ಕೊನೆಗೂ ಗ್ರೀನ್ ಸಿಗ್ನಲ್ ದೊರೆತಿದೆ. ಕಂಬಳ ಪ್ರೇಮಿಗಳು ಹಾಗೂ ಸಂಘಟಕರುಗಳ ಹಲವು ಸಮಯದ ಹೋರಾಟಕ್ಕೆ ಗೆಲುವು ದೊರೆತಿದ್ದು, ಆತಂಕ ದೂರವಾಗಿದೆ.

ಕೇಂದ್ರ ಸರಕಾರ ಜೂ.3ರಂದು ಸುಗ್ರೀವಾಜ್ಞೆ ಹೊರಡಿಸಿದ್ದು ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ ತಂಕೋಲನ್ ಹೌಕಿಪ್ ಅಂಕಿತ ಹಾಕಿ ರಾಜ್ಯಕ್ಕೆ ರವಾನಿಸಿದ್ದಾರೆ. ಮೂಲಕ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಕಂಬಳದ ತಿದ್ದುಪಡಿ ವಿಧೇಯಕ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ. ಈ ಕಡತ ಕರ್ನಾಟಕದ ಸಂಸದೀಯ ಕಾರ್ಯದರ್ಶಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ, ಕಾರ್ಯದರ್ಶಿಗೆ ರವಾನೆಯಾಗಲಿದೆ. ರಾಜ್ಯಕ್ಕೆ ಕಳುಹಿಸಿಕೊಟ್ಟ ಕಂಬಳ ಕಾನೂನು ತಿದ್ದುಪಡಿ ವಿಧೇಯಕ ಮುಂದಿನ ವಿಧಾನಸಭೆ ಮತ್ತು ವಿಧಾನಸಭೆ ಅಧಿವೇಶನದಲ್ಲಿ ಗಜೆಟ್ ನೋಟಿಫಿಕೇಶನ್ ಆಗುವುದರೊಂದಿಗೆ ಕಾನೂನಾಗಿ ಮಾರ್ಪಾಡಾಗಲಿದೆ.

ಕಂಬಳ ಕ್ರೀಡೆಗೆ ಸುಗ್ರೀವಾಜ್ಞೆ ಪ್ರಕಟವಾದ ಕಾರಣ ಕಂಬಳ ಕ್ರೀಡೆ ಆಯೋಜನೆಗೆ ಯಾವುದೇ ಅಡ್ಡಿ ಆತಂಕವಿಲ್ಲ. ಕಂಬಳ ಉಳಿವಿಗಾಗಿ ನಡೆಸಲಾಗಿದ್ದ ಹೋರಾಟಕ್ಕೆ ಕೊನೆಗೂ ಜಯ ದೊರೆತಂತಾಗಿದೆ.

ಚಿತ್ರ: ಅಂತರ್ಜಾಲ ಮೂಲ

Exit mobile version