Site icon Kundapra.com ಕುಂದಾಪ್ರ ಡಾಟ್ ಕಾಂ

ತಲೆಮಾರುವಿನಿಂದ ತಲೆಮಾರಿಗೆ ಪುಸ್ತಕಗಳಿಂದಾಗಿ ಜ್ಞಾನ ಹಸ್ತಾಂತರ: ಡಾ ಹೆಚ್‌ವಿಎನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪುಸ್ತಕವು ಜ್ನಾನದ ಸಂಕೇತ. ಭಾರತೀಯ ಸಂಸ್ಕೃತಿಯಲ್ಲಿ ಪುಸ್ತಕಗಳಿಗೆ ಅತ್ಯಂತ ವಿಶೇಷ ಸ್ಥಾನವಿದೆ. ಸಂಸ್ಕೃತಿ, ಧರ್ಮ ಮತ್ತು ಜ್ನಾನ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಸ್ತಾಂತವಾಗಲು ಮುಖ್ಯ ಕಾರಣ ಪುಸ್ತಕ. ಪುಸ್ತಕ ಸಂಸ್ಕೃತಿ ರೂಢಿಯಾಗಲಿ. ಅದಕ್ಕೆ ಈ ಕಾರ್ಯಕ್ರಮವು ನಾಂದಿಯಾಗಲಿ ಎಂದು ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರಾದ ಡಾ.ಹೆಚ್.ವಿ.ನರಂಸಿಂಹಮೂರ್ತಿ ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ ಭಂಡರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ನಡೆದ ಪುಸ್ತಕ ಹಸ್ತಾಂತರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಬಾಪೂಜಿ ವಿದ್ಯಾಸಂಸ್ಥೆ ದಾವಣಗೆರೆಯ ನಿವೃತ್ತ ಸಂಸ್ಕೃತ ಉಪನ್ಯಾಸಕರಾದ ಡಾ.ಎನ್.ಕೆ ರಾಮಚಂದ್ರ ಪ್ರಾಂಶುಪಾಲರಿಗೆ ಪುಸ್ತಕ ಹಸ್ತಾಂತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥೆ ಡಾ.ಯಶವಂತಿ ಕೆ ಸ್ವಾಗತಿಸಿದರು. ಉಪಾನ್ಯಾಸಕಿ ಗಾಯತ್ರಿ ಸುವರ್ಣ ವಂದಿಸಿದರು. ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

 

Exit mobile version