Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕಟ್ಟಡ ಕಾರ್ಮಿಕರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೇಶದ ರಾಜಕೀಯ ಪರಿಸ್ಥಿತಿ, ಕೇಂದ್ರ ರಾಜ್ಯ ಸರಕಾರದ ಆರ್ಥಿಕ ನೀತಿ ದುಡಿಯುವ ವರ್ಗ ಕಾರ್ಮಿಕರ ಪರವಾಗಿಲ್ಲ. ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲಾ ಧರ್ಮದವರು ಸಂವಿದಾನ ಬದ್ಧ ಧಾರ್ಮಿಕ ಆಚರಣೆಯ ಹಕ್ಕು ಹೊಂದಿದ್ದಾರೆ. ಆದರೆ ಪ್ರಧಾನಿ ಮೋದಿಯವರ ಸರ್ಕಾರ ಧರ್ಮದ ಹೆಸರಿನಲ್ಲಿ ಯುವ ಮನಸ್ಸನ್ನು ಒಡೆಯುತ್ತಿದೆ, ದೇಶದ ರಾಜಕೀಯ ಬಲಪಂಥವಾಗದ ಕಡೆಗೆ ಸಾಗುವ ಸೂಚನೆ ಇದೆ. ಧರ್ಮದ ಹೆಸರಿನಲ್ಲಿ ಸಮಾಜ ಸ್ವಾಸ್ಥ್ಯ ಕದಡುವ ಶಕ್ತಿಗಳ ವಿರುದ್ಧ ಕಟ್ಟಡ ಕಾರ್ಮಿಕರು ಧ್ವನಿ ಏರಿಸಬೇಕು. ಕಟ್ಟಡ ಕಾರ್ಮಿಕರಿಗಾಗಿ ನಮ್ಮ ದೇಶದಲ್ಲಿ ಸುಮಾರು ೨೭ಕ್ಕಿಂತ ಹೆಚ್ಚು, ಆರ್ಥಿಕ/ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ಭಾರತ ಸರ್ಕಾರದಿಂದ ಜ್ಯಾರಿ ಮಾಡಲಾಗಿದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದು ೭ ದಶಕವಾದರೂ ಈ ಕಾನೂನುಗಳು ಶೇ. ೯೦ ರಷ್ಟು ಕಟ್ಟಡ ಕಾರ್ಮಿಕರಿಗೆ ಜ್ಯಾರಿಯಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಈಗಲೂ ಬಹುಸಂಖ್ಯಾತ ಕಟ್ಟಡ ಕಾರ್ಮಿಕರು ಯಾವೊಂದು ಕಾರ್ಮಿಕ ಸಂಘಗಳಿಗೂ ಸೇರದಿರುವುದು ಮತ್ತು ಕಾರ್ಮಿಕ ಸಂಘಗಳ ಕುರಿತಾಗಿ ಅವರಲ್ಲಿ ತಿಳುವಳಿಕೆ ಇಲ್ಲದಿರುವುದು ದೊಡ್ಡ ಕೊರತೆಯಾಗಿದೆ ಎಂದು ಅಖಿಲ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಬಂಜನ್ ಚಕ್ರವರ್ತಿ ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನದ ಆರಂಭದಲ್ಲಿ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ರಾಜ್ಯ ಅಧ್ಯಕ್ಷ ಎನ್. ವೀರಸ್ವಾಮಿ ಧ್ವಜಾರೋಹಣ ನೆರವೇರಿಸಿ ಪ್ರತಿನಿಧಿ ಸಂಗಾತಿಗಳು ಹುತಾತ್ಮ ಸ್ತಂಭಕ್ಕೆ ಕೆಂಪು ವಂದನೆ ಸಲ್ಲಿಸಿದ ಬಳಿಕ ಕಾಂ|| ದೋಗು ಸುವರ್ಣ ನಗರದ, ಕಾಂ|| ಪ್ರಸನ್ನ ಕುಮಾರ ವೇದಿಕೆಯ ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ರಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ೩ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದಲ್ಲಿ ಏಕ ರೂಪ ಜಿ.ಎಸ್.ಟಿ. ತೆರಿಗೆ ಜ್ಯಾರಿಗೆ ತರಲಾಗಿದೆ. ಜಿ.ಎಸ್.ಟಿ. ಯಿಂದ ದೇಶದ ಜನರು ಒಳ್ಳೆಯ ದಿನಗಳನ್ನು ಕಾಣಲಿದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಇಂದು ದಿನಬಳಕೆ ಅಗತ್ಯ ಆಹಾರ ವಸ್ತುಗಳ ಬೆಲೆ ಏರಿಕೆ ವಿಪರೀತ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಕಾರ್ಮಿಕ, ರೈತ, ಕೃಷಿ ಕೂಲಿ ಕಾರ್ಮಿಕರಿಗೆ ಒಳ್ಳೆಯ ದಿನಗಳು ಬರುವ ಬದಲು ಕೆಟ್ಟ ದಿನಗಳು ಬಂದಿವೆ. ದುಡಿಯುವ ವರ್ಗದ ಮೇಲೆ ಜಿ.ಎಸ್.ಟಿ ದುಷ್ಪರಿಣಾಮ ಬೀರಲಿದೆ. ಇದರ ವಿರುದ್ಧ ದೇಶಾದ್ಯಂತ ಐಕ್ಯತೆಯ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ೧೦,೭೪,೦೦೦ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕಾರ್ಮಿಕರು ಇದ್ದಾರೆ. ರಾಜ್ಯದ ೨೧ ಜಿಲ್ಲೆಗಳಲ್ಲಿ ಸಂಘಟನೆ ಸಕ್ರೀಯವಾಗಿದ್ದರೂ ದುರಂತವೆಂದರೆ ಚುನಾವಣೆ ಸಂದರ್ಭದಲ್ಲಿ ಓಟು ಬಂಡವಾಳಶಾಹಿ ಪರ ಇರುವ ಪಕ್ಷಗಳಿಗೆ ನೀಡುತ್ತೀರಿ. ಸವಲತ್ತಿಗಾಗಿ ಕಾನೂನು ಜ್ಯಾರಿಗೊಸ್ಕರ ಬೀದಿಯಲ್ಲಿ ನಿಂತು ಹೋರಾಟ ನಡೆಸಲು ಸಿಐಟಿಯು ಸೇರಿದಂತೆ ಎಡಪಕ್ಷಗಳು ಬೇಕು. ಸವಲತ್ತು ಪಡೆಯುವ ಕಾರ್ಮಿಕರಾದ ನೀವು ಓಟನ್ನು ಮಾತ್ರ ಅನ್ಯರಿಗೆ ಚಲಾಯಿಸುತ್ತೀರಿ. ಪ್ರತಿ ಗ್ರಾಮದಲ್ಲಿಯೂ ಸಂಘಟಿತರಾಗಿರುವ ಕಟ್ಟಡ ಕಾರ್ಮಿಕರು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕಾಗಿದೆ. ನಮ್ಮ ಹಕ್ಕುಗಳಿಗೋಸ್ಕರ ಇದು ಅನಿವಾರ್ಯವೆಂದು ದಿಬಂಜನ್ ಚಕ್ರವರ್ತಿ ಪ್ರತಿಪಾದಿಸಿದರು.

ಕಟ್ಟಡ ಉದ್ಯಮದ ವಿವಿಧ ಭಾಗಗಳಲ್ಲಿ ಶೇ. ೫೧ ರಷ್ಟು ಮಹಿಳಾ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅಕುಶಲ ಕಾರ್ಮಿಕರಾದ ಇವರನ್ನು ಒಂದೆಡೆ ಮಾಲಿಕರು, ಗುತ್ತಿಗೆದಾರರು, ಮತ್ತು ನಮ್ಮ ಸಾಮಾಜಿಕ ವ್ಯವಸ್ಥೆ ತುಂಬಾ ಅಸಮಾನತೆ ಮತ್ತು ಶೋಷಣೆ ಕಣ್ಣೋಟದಿಂದಲೆ ನೋಡುತ್ತಾ ಬಂದಿದೆ. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಕೆಲಸ ಮಾಡುತ್ತಿದ್ದರೂ ಹಲವು ಕುಶಲತೆ ಹೊಂದಿದ ಕೆಲಸಗಳಿಂದ ಅವರನ್ನು ಈ ಉದ್ಯಮದಲ್ಲಿ ದೂರವಿಟ್ಟು ಈ ಎಲ್ಲಾ ಗಂಡಸರ ಪಾರುಪತ್ಯೆವೇ ಹೆಚ್ಚಾಗಿದೆ. ಮನೆಯೊಳಗೂ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಮಹಿಳಾ ಕಾರ್ಮಿಕರಿಗೆ ಸಮಾನ ಅವಕಾಶ ಮತ್ತು ಸಮಾನ ವೇತನಗಳನ್ನು ನೀಡುತ್ತಿಲ್ಲ. ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ಕೂಡಾ ನೀಡುತ್ತಿಲ್ಲ. ಇದರ ಜೊತೆ ಗುತ್ತಿಗೆದಾರರು ಮತ್ತು ಮಾಲಕರು ಲೈಂಗಿಕ ಕಿರುಕುಳಗಳಿಗೂ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಹಿಳೆಯರು ಬಲಿಯಾಗುತ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಮಕ್ಕಳ ಆರೈಕೆಗೆ ವಿಶ್ರಾಂತಿ ಗ್ರಹ ಇತ್ಯಾದಿಗಳು ಬಹುಪಾಲು ಇಲ್ಲವೇ ಇಲ್ಲ ಎಂದು ಹೇಳಿದರು.

ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ರಾಷ್ಟ್ರ ಅಧ್ಯಕ್ಷರಾದ ಸಿಂಗಾರವೇಲು ರವರು ಮುಖ್ಯ ಅತಿಥಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುತ್ತಾ, ಸಿಐಟಿಯು ದೇಶದ್ಯಾಂತ ೬೦ ಲಕ್ಷ ಸದಸ್ಯರನ್ನು ಹೊಂದಿರುವ ಬಲಿಷ್ಠ ಕಾರ್ಮಿಕ ಸಂಘಟನೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಅWಈI ಸಂಘದ ೧೨ ಲಕ್ಷದ ಸದಸ್ಯತ್ವ ನೊಂದಣಿಯಾಗಿದ್ದು, ಇದು ಒಟ್ಟು ಸದಸ್ಯರ ೧/೫ ನೇ ಭಾಗ ಹೊಂದಿರುತ್ತದೆ. ಕೇರಳ ರಾಜ್ಯವೊಂದರಲ್ಲಿ ೪ಳಿ ಲಕ್ಷ ಕಟ್ಟಡ ಕಾರ್ಮಿಕರು ಸದಸ್ಯರಾಗಿದ್ದಾರೆ. ಕಣ್ಣೂರು ಜಿಲ್ಲೆವೊಂದರಲ್ಲಿ ೫೦ ಸಾವಿರ ಕಟ್ಟಡ ಕಾರ್ಮಿಕರು ಸದಸ್ಯರಾಗಿರುವುದು ಇಡೀ ಕರ್ನಾಟಕ ರಾಜ್ಯದ ೩೦ ಸಾವಿರ ಸದಸ್ಯರಿಗಿಂತ ಅಧಿಕವಾಗಿದ್ದು, ಬಲಿಷ್ಠ ಸಂಘಟನೆಯಾಗಿ ಮೂಡಿಬಂದಿದೆ. ಇದು ಕರ್ನಾಟಕದಲ್ಲಿ ಅWಈI ಸಂಘಟನೆಯ ಸ್ಥಗಿತತೆ ಎದ್ದು ತೋರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಇಡೀ ದೇಶದಲ್ಲಿ ಸುಮಾರು ೩೨ ಸಾವಿರ ಕೋಟಿ ರೂಪಾಯಿ ಸೆಸ್ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿದ್ದರೆ ಕರ್ನಾಟಕ ರಾಜ್ಯದಲ್ಲಿ ಸುಮಾರು ರೂ. ೫,೬೫೦ ಕೋಟಿ ಸೆಸ್ ಕಲ್ಯಾಣ ಮಂಡಳಿಯಲ್ಲಿದ್ದರೂ ಕೇವಲ ರೂ. ೧೭೭ ಕೋಟಿ ಮಾತ್ರ ಆಡಳಿತ ವೆಚ್ಚ ಹಾಗೂ ಕಾರ್ಮಿಕರ ವಿವಿಧ ಸೌಲಭ್ಯಕ್ಕಾಗಿ ವೆಚ್ಚವಾಗಿರುವುದು ಗಮನಿಸಬೇಕಾಗಿದೆ. ಸರಕಾರ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಈ ಸೆಸ್ ನಿಧಿಯ ಮೇಲೆ ಕಣ್ಣಿಟ್ಟಿದ್ದು ಈ ಹಣವನ್ನು ಇತರ ವೆಚ್ಚಕ್ಕೆ ಬಳಸುವ ಪ್ರಯತ್ನವನ್ನು ತಡೆಯಬೇಕಾಗಿದೆ ಎಂದು ಹೇಳಿದರು.

ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ತೆಲಂಗಾಣ ರಾಜ್ಯ ಅಧ್ಯಕ್ಷ ಕೊಟ್ಟಂ ರಾಜು, ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಂತೇಶ, ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಪಿ. ವಿಶ್ವನಾಥ ರೈ, ಸಮ್ಮೇಳನಕ್ಕೆ ಶುಭಾಶಯ ಕೋರಿ ಮಾತನಾಡಿದರು. ಅWಈI ರಾಜ್ಯ ಅಧ್ಯಕ್ಷ ಎನ್. ವೀರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್, ಸ್ವಾಗತ ಸಮಿತಿಯ ಅಧ್ಯಕ್ಷ ಯು. ದಾಸಭಂಡಾರಿ, ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕೋಶಾಧಿಕಾರಿ ಶೇಖರ ಬಂಗೇರ, ಸಿಐಟಿಯು ಕುಂದಾಪುರ ತಾಲೂಕು ಅಧ್ಯಕ್ಷ ಎಚ್. ನರಸಿಂಹ, ಅWಈI ರಾಜ್ಯ ಸಮಿತಿ ಪದಾಧಿಕಾರಿಗಳಾದ ಹರೀಶ್ ನಾಯ್ಕ ಉತ್ತರ ಕನ್ನಡ, ತಿಲಕ್ ಗೌಡ ಉತ್ತರ ಕನ್ನಡ, ಬಾಲಕೃಷ್ಣ ಶೆಟ್ಟಿ ಉಡುಪಿ, ರಾಮಕೃಷ್ಣ ಬೆಂಗಳೂರು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮ್ಮೇಳನದ ೨ನೇ ದಿನದ ಕಲಾಪದ ಕೊನೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡುತ್ತ, ದುಡಿಯುವ ಶ್ರಮ ಜೀವಿಗಳಲ್ಲಿ ಸುಮಾರು ೩ಳಿ ಕೋಟಿ ಅಂದರೆ ಶೇ. ೧೬ ರಷ್ಟು ಜನರು ನಿರ್ಮಾಣ ಕ್ಷೇತ್ರದ ಅವಲಂಭನೆಯಲ್ಲಿ ಇದ್ದಾರೆ. ಕಟ್ಟಡ ಮತ್ತು ಇತರೇ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಕಾರ್ಮಿಕರು ದೇಶದ ಅಭಿವೃದ್ಧಿಗೆ ಆರ್ಥಿಕ ಪ್ರಗತಿಗೆ ಪ್ರಮುಖ ಕೊಡುಗೆ ಕೊಡುತ್ತಿದ್ದಾರೆ. ದೇಶದ ಒಟ್ಟು ಆಂತರಿಕ ಉತ್ಪಾದನೆ ವಲಯದ ರೂ. ೨೨ ಲಕ್ಷ ಕೋಟಿಯಲ್ಲಿ ರೂ. ೧೨ ಲಕ್ಷ ಕೋಟಿ ಕಟ್ಟಡ ಕಾರ್ಮಿಕರ ಕೊಡುಗೆ ಆಗಿರುತ್ತದೆ. ಒಟ್ಟು ಉತ್ಪಾದನೆಯ ಶೇ. ೨೦ ರಷ್ಟು ಕೊಡುಗೆ ಕೊಟ್ಟಿರುವ ಕಟ್ಟಡ ಕಾರ್ಮಿಕರಿಗೆ ಕೇಂದ್ರ ರಾಜ್ಯ ಸರಕಾರ ಏನು ಮಾಡಿದೆ ? ದೊಡ್ಡ ಪ್ರಮಾಣದ ಸೌಲಭ್ಯ ಕೊಡಬೇಕಾದ ಕೇಂದ್ರದ ಮೋದಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಹೇಳಿದರು. ಕೇರಳ ರಾಜ್ಯದ ಮಾದರಿಯಲ್ಲಿ ಸದಸ್ಯತ್ವ ನೋಂದಣಿ ಮಾಡಬೇಕು. ನಾವು ಹಳ್ಳಿಗೆ ಹೋಗಿ ಕಾರ್ಮಿಕರನ್ನು ಸಂಘಟಿಸಲು ಒಂದಾಗಬೇಕು ಎಂದು ಅವರು ಕರೆ ನೀಡಿದರು. ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ ಶುಭ ಕೋರಿ ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ಜರಗಿದ ೨ನೇ ರಾಜ್ಯ ಸಮ್ಮೇಳನದ ನಂತರರಾಜ್ಯ ಸಮಿತಿಯ ವತಿಯಿಂದ ನಡೆಸಿದ ಹೋರಾಟ ಚಳುವಳಿಯ ಚಟುವಟಿಕೆಯ ಲಿಖಿತ ವರದಿ ಹಾಗೂ ಲೆಕ್ಕಪತ್ರಗಳನ್ನು ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್ ಸಮ್ಮೇಳನದ ಸಭೆಯಲ್ಲಿ ಮಂಡಿಸಿದರು, ನಂತರ ವರದಿಯ ಮೇಲೆ ಜಿಲ್ಲಾವಾರು ಗುಂಪು ಚರ್ಚೆ ನಡೆಸಿದ ಪ್ರತಿನಿಧಿ ಸಂಗಾತಿಗಳು, ೪ ಮಹಿಳಾ ಪ್ರತಿನಿಧಿಗಳು ಸೇರಿದಂತೆ ಒಟ್ಟು ೨೯ ಮಂದಿ ಪ್ರತಿನಿಧಿಗಳು ವರದಿಯ ಮೇಲೆ ಟೀಕೆ ಸ್ವಯಂ ಟೀಕೆ ಹಾಗೂ ವಿಮರ್ಶೆ ನಡೆಸಿದರು. ಕೊನೆಯಲ್ಲಿ ಕೆಲವು ತಿದ್ದುಪಡಿಯೊಂದಿಗೆ ವರದಿಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ೨೯ ಮಹಿಳೆಯರು ಸೇರಿದಂತೆ ಒಟ್ಟು ೨೦೯ ಪ್ರತಿನಿಧಿ ಸಂಗಾತಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕುಮಾರಿ ವಿಶಾಲ ಬೆಂಗಳೂರು ಉತ್ತರ ಜಿಲ್ಲೆಯಿಂದ ಅತ್ಯಂತ ಕಿರಿಯ ಪ್ರತಿನಿಧಿಯಾಗಿ, ಅWಈI ರಾಜ್ಯ ಅಧ್ಯಕ್ಷರಾದ ಎನ್. ವೀರಸ್ವಾಮಿ (೭೯) ಹಿರಿಯ ಪ್ರತಿನಿಧಿ ಸಂಗಾತಿಗಳಾಗಿ ಸಮ್ಮೇಳನದಲ್ಲಿ ಇದ್ದರು. ಸಂಘಟನೆಯ ಒಟ್ಟು ೩೫ ಮಂದಿ ಪೂರ್ಣಾವಧಿ ಕಾರ್ಯಕರ್ತರು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಪರಿಚಯ ಪತ್ರ ಸಮಿತಿಯ ಸಂಚಾಲಕ ಪಿ.ಕೆ. ಸುಬ್ರಹ್ಮಣ್ಯ ತುಮಕೂರು ಪರಿಚಯ ಪತ್ರದ ವಿವರ ಮಂಡಿಸಿದರು.

ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ದ್ವಿತೀಯ ಪಿಯುಸಿ ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ಶೇ. ೮೦ ಕ್ಕಿಂತ ಅಧಿಕ ಅಂಕ ಪಡೆದ ಕಟ್ಟಡ ಕಾರ್ಮಿಕರ ಸುಮಾರು ೬೦ ಮಕ್ಕಳನ್ನು ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ರಾಷ್ಟ್ರ ಅಧ್ಯಕ್ಷರಾದ ಸಿಂಗಾರವೇಲು ಕಿರುಕಾಣಿಕೆ ನೀಡಿ ಸನ್ಮಾನಿಸಿದರು.

ಸಮ್ಮೇಳನದ ಸಭಾಂಗಣದಲ್ಲಿ ಮೊದಲ ದಿನದ ಕಲಾಪದ ಕೊನೆಯಲ್ಲಿ ಮನೋರಂಜನೆ ಕಾರ್ಯಕ್ರಮವಾಗಿ ಕರಾವಳಿ ಗಂಡು ಕಲೆಯಾದ ಯಕ್ಷಗಾನ ಪ್ರದರ್ಶನ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಉಡುಪಿ ಮುಖಂಡರಾದ ವಾಮನ್ ಪೂಜಾರಿಯವರಿಂದ ಅಮೋಘ ಯೋಗಾಸನ ಪ್ರದರ್ಶನ ಕಾರ್ಯಕ್ರಮವನ್ನು ಎಲ್ಲಾ ಪ್ರತಿನಿಧಿ ಸಂಗಾತಿಗಳು ವಿಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ರಾಜ್ಯ ಪದಾಧಿಕಾರಿಯಾಗಿದ್ದು, ನಿರ್ಗಮಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರಾದ ವಸಂತ ಆಚಾರ್‌ರವರಿಗೆ ಬೀಳ್ಕೊಡುಗೆಯಾಗಿ ಹೃದಯ ಸ್ಪರ್ಶಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಮ್ಮೇಳನದ ಯಶಸ್ವಿಗಾಗಿ ದುಡಿದ ಸಹೊದರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸ್ವಯಂ ಸೇವಕ ಸಂಗಾತಿಗಳನ್ನು ವೇದಿಕೆಯಲ್ಲಿ ಕಿರುಕಾಣಿಕೆ ನೀಡಿ ಗೌರವಿಸಲಾಯಿತು. ರಾಜೀವ ಪಡುಕೋಣೆ ಈ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಭಾರತ ನಿರ್ಮಾಣ ಕಾರ್ಮಿಕರ ಫೆಡರೇಶನ ನೂತನ ಪ್ರಧಾನ ಕಾರ್ಯದರ್ಶಿ ಕೆ. ಮಹಂತೇಶ ಸಮ್ಮೇಳನದ ಯಶಸ್ವಿಗಾಗಿ ದುಡಿದ ಉಡುಪಿಯ ಸ್ವಾಗತ ಸಮಿತಿಯ ಎಲ್ಲಾ ಸಂಗಾತಿಗಳಿಗೂ ವಿವಿಧ ಸಂಘಟನೆಯ ಮುಖಂಡರುಗಳಿಗೂ ಹಾರ್ಧಿಕ ಅಭಿನಂದನೆ ಸಲ್ಲಿಸಿದರು. ಗೆಲುವು ನಮ್ಮದೇ ಹಾಡಿನೊಂದಿಗೆ ಸಮ್ಮೇಳನ ಕೊನೆಗೊಂಡಿತು.

 

Exit mobile version