Site icon Kundapra.com ಕುಂದಾಪ್ರ ಡಾಟ್ ಕಾಂ

ಭಂಡಾರ್ಕಾರ್ಸ್ ಕಾಲೇಜು: ಐ.ಸಿ.ಟಿ ಆಧಾರಿತ ತರಗತಿ ಲೋಕಾರ್ಪಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನೂತವಾಗಿ ನಿರ್ಮಿಸಿದ ಶ್ರೀ ವಿ.ಎನ್ ಭಂಡಾರ್ಕರ್ ಮತ್ತು ಶ್ರೀಮತಿ ಲಕ್ಷ್ಮಿದೇವಿ ಭಂಡಾರ್ಕರ್ ಐ.ಸಿ.ಟಿ ಆಧಾರಿತ ತರಗತಿ ಕೊಠಡಿಯನ್ನು ಡಾ. ಎ.ಎಸ್. ಭಂಡರ್ಕರ್ ಕುಟುಂಬದವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ.ವಿವೇಕ್ ಭಂಡಾರ್ಕರ್ ಮಾತನಾಡಿ ಕಾಲೇಜಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅಧ್ಯಯನ ಮಾಡಿ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಬರುವ ಸವಾಲುಗಳನ್ನು ಎದುರಿಸಿ ಗುರಿಯತ್ತ ಗಮನ ಹರಿಸಿ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕರ್ ಕುಟುಂಬದ ಶಾಂತಾ ಭಂಡಾರ್ಕರ್ ಸುಧಾ ಭಂಡಾರ್ಕರ್, ವಿದ್ಯಾ ಭಂಡಾರ್ಕರ್‌ಶರ್ಮಿಳಾ ಭಂಡಾರ್ಕರ್ ಉಪಸ್ಥಿತರಿದ್ದರು. ವಿಶ್ವಸ್ಥ ಮಂಡಳಿಯ ಸದಸ್ಯರಾದ ಶಾಂತಾರಾಮ್ ಪ್ರಭು, ಪ್ರಜ್ನೇಶ್ ಪ್ರಭು, ವಿಜಯಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕರಾದ ನಾಗರಾಜ್ ವಿಜಯಲಕ್ಷ್ಮಿ ಶಾಂತಾರಾಮ್ ಮುಂತಾದವರು ಉಪಸ್ಥಿತರಿದ್ದರು. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ನಿರ್ವಹಿಸಿದರು.

Exit mobile version