Site icon Kundapra.com ಕುಂದಾಪ್ರ ಡಾಟ್ ಕಾಂ

ಶುಭದಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿ ವಿದ್ಯಾರ್ಥಿ ಪರಿಷತ್‌ನ್ನು ಉದ್ಘಾಟನೆ ಆದಿತ್ಯ ಆಡಿಟೋರಿಯಂನಲ್ಲಿ ನಡೆಯಿತು.

ಶಾಲೆಯ ಮುಖ್ಯೋಪಾಧ್ಯಾಯರಾದ ಎಮ್ ಜಿ ಬಾನಾವಾಳಿಕರ್ ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಶಂಕರ ಪೂಜಾರಿಯವರು ಭಾಗವಹಿಸಿದರು. ವಿದ್ಯಾರ್ಥಿ ಪರಿಷತ್ ನಾಯಕಿಯಾಗಿ ಕುಮಾರಿ ಶಿಲ್ಪಾ, ವಿದ್ಯಾರ್ಥಿ ಪರಿಷತ್ ಉಪನಾಯಕಿಯಾಗಿ ಕುಮಾರಿ ಸ್ವೀಕೃತಿ. ಹಾಗೂ ವಿದ್ಯಾರ್ಥಿ ಪರಿಷತ್‌ನ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಹಾಗೂ ಕುಮಾರಿ ಪುಣ್ಯಶ್ರೀ ಇವರು ಪ್ರಮಾಣ ವಚನ ಸ್ವೀಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಗೋವಿಂದರಾಜು ಪ್ರಮಾಣ ವಚನ ಭೋಧೀಸಿದರು ರೇಷ್ಮಾ ಹಾಗೂ ವಾಣಿ ಕರ್ತವ್ಯಗಳನ್ನು ತಿಳಿಸಿದರು. ಕುಮಾರಿ ರೂಪಾ ಸ್ವಾಗತಿಸಿ, ಕುಮಾರಿ ಚಂದ್ರಾವತಿ ವಂದಿಸಿ, ಕುಮಾರಿ ವಿದ್ಯಾ ಕಾರ‍್ಯಕ್ರಮ ನಿರೂಪಿಸಿದರು.

Exit mobile version