Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ವಲಯ ಧ್ವನಿ ಬೆಳಕು ಸಂಯೋಜಕರ ಸಂಘದ 6ನೇ ವಾರ್ಷಿಕೋತ್ಸವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯಾವುದೇ ಸಮಾರಂಭ ಸುಂದರವಾಗಿ ಮೂಡಿಬರಬೇಕಾದರೆ ಕಾರ್ಯಕ್ರಮ ಸಂಯೋಜಕರ ಜತೆ ಧ್ವನಿ ಬೆಳಕು ಸಂಯೋಜಕರ ಶ್ರಮ ಮತ್ತು ಕೌಶಲ್ಯ ಮಹತ್ವದ ಪಾತ್ರ ವಹಿಸಿ ಸಮಾರಂಭದ ಯಶಸ್ವಿಗೆ ಕಾರಣವಾಗುತ್ತದೆ ಎಂದು ಕುಂದಾಪುರದ ಟಾರ್ಪೋಡೊಸ್ ಸ್ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ಗೌತಮ ಶೆಟ್ಟಿ ಹೇಳಿದರು.

ಅವರು ಕುಂದಾಪುರ ವಲಯ ಧ್ವನಿ ಬೆಳಕು ಸಂಯೋಜಕರ ಸಂಘದ ೬ನೇ ವಾರ್ಷಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಎಚ್ ಉದಯ ಆಚಾರ್, ಕಾರ್ಯದರ್ಶಿ ದಾಮೋದರ, ಉಪಾಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಕುಂದಾಪುರ ವಲಯದ ಗೌರವಾಧ್ಯಕ್ಷರಾದ ಸತೀಶ, ಕೋಶಾಧಿಕಾರಿ ರಾಜ್‌ಗೋಪಾಲ, ಬ್ರಹ್ಮಾವರ ವಲಯದ ಅಧ್ಯಕ್ಷರಾದ ಪುಂಡಲೀಕ ಕಾಮತ್, ಬೈಂದೂರು ವಲಯದ ಅಧ್ಯಕ್ಷರಾದ ಶಶಿಧರ ಶಣೈ, ಉಡುಪಿ ವಲಯದ ಅಧ್ಯಕ್ಷರಾದ ಅನಿಲ ಕುಮಾರ್, ಕುಂದಾಪುರ ವಲಯದ ಅಧ್ಯಕ್ಷರಾದ ರೋನಿ ಬೆರಟ್ಟೊ, ಕುಂದಾಪುರ ವಲಯ ಪ್ರತಿನಿಧಿಗಳಾದ ಪಾಂಡುರಂಗ ಜೋಗಿ, ಸರ್ದಾರ ,ನಿಕಟಪೂರ್ವ ಕಾರ್ಯದರ್ಶಿ ಭರತ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ವಿವಿಧ ಧ್ವನಿ ಬೆಳಕು ಸಂಸ್ಥೆಗಳ ಮಾಲೀಕರಾದ ಸತೀಶ, ರಾಘು ಪೂಜಾರಿ, ಪಿ.ವಿ.ನರಸಿಂಹ, ಕೃಷ್ಣನಂದ ಶ್ಯಾನುಭಾಗ, ನಾರಾಯಣ.ಕೆ, ಹಾಗೂ ನೌಕರರಾದ ಶ್ರೀನಿವಾಸ ಖಾರ್ವಿಯವರನ್ನ ಸನ್ಮಾನಿಸಲಾಯಿತು.ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷರಾದ ಕಿಶೋರ ಕುಮಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದಸ್ಯ ನರಸಿಂಹ ಇವರಿಗೆ ಸಂಸ್ಥೆಯ ವತಿಯಿಂದ ೨೫ ಸಾವಿರ ಧನ ಸಹಾಯ ವಿತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶಂಕರ ಕಂಚುಗಾರ ಸ್ವಾಗತಿಸಿದರು, ವಿಶ್ವನಾಥ ಕಾರ್ಯಕ್ರಮವನ್ನು ವಂದಿಸಿದರು.

Exit mobile version