Kundapra.com ಕುಂದಾಪ್ರ ಡಾಟ್ ಕಾಂ

ಸಾಧನ ಕಲಾ ಸಂಗಮ: ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾಧನ ಕಲಾ ಸಂಗಮ (ರಿ), ಹಲ್ಸನಾಡು ಬಿಲ್ಡಿಂಗ್, ಮುಖ್ಯರಸ್ತೆ, ಕುಂದಾಪುರದಲ್ಲಿ ರಂದು ಯಕ್ಷಗಾನ ತರಬೇತಿ ತರಗತಿಯ ಉದ್ಘಾಟನೆಯನ್ನು ಖ್ಯಾತ ಯಕ್ಷಗಾನ ಕಲಾವಿದ ಐರೋಡಿ ಗೋವಿಂದಪ್ಪನವರಿಂದ ನೆರವೇರಿದರು. ಬಳಿಕ ಮಾತನಾಡಿದ ಅವರು ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನ ಬರೆ ಶೋಕಿಗಾಗಿ ಯಕ್ಷಗಾನವೆಂದಂತಾಗಿದೆ. ಅದು ಆ ಕಲೆಗೆ ಮಾಡುತ್ತಿರುವ ಅಪಚಾರ. ಬಡಗು ತಿಟ್ಟಿನ ಮೂಲ ಶಿಕ್ಷಣ ನೀಡುವುದರ ಮೂಲಕ ಅತ್ತ್ಯುತ್ತಮ ಯಕ್ಷಗಾನ ಕಲಾವಿದರನ್ನು ತಯಾರು ಮಾಡಿ, ಸಮಾಜಕ್ಕೆ ಸಮರ್ಪಿಸುವಂತೆ ಕೇಳಿಕೊಂಡರು.

ನಾರಾಯಣ ಐತಾಳರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು, ಯಕ್ಷಗಾನ ಕಲಾವಿದ ಹಾಗೂ ಗುರು ಗಣಪತಿ ಹೆಗಡೆ, ಕಡ್ಲೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಿಸುವ ಮೂಲಕ ಸಾರ್ಥಕ್ಯವನ್ನು ಕಂಡುಕೊಳ್ಳ ಬೇಕು, ಆ ನಿಟ್ಟಿನಲ್ಲಿ ಶ್ರಮವಹಿಸಿ ಪ್ರಯತ್ನ ಮಾಡುವುದಾಗಿ ಭರವಸೆ ಇತ್ತರು. ಇನ್ನೋರ್ವ ಹವ್ಯಾಸಿ ಯಕ್ಷಗಾನ ಕಲಾವಿದರಾದ ಆಶೋಕ ಆಚಾರ್ ಶುಭಶಯವನ್ನು ಕೋರಿದರು, ಚಿತ್ರಕಲಾವಿದ ಮಂಜುನಾಥ ಮಯ್ಯರು ವಂದನಾರ್ಪಣೆ ಸಲ್ಲಿಸಿದರು. ತದನಂತರ ಯಕ್ಷಗಾನ ತರಗತಿ ನಡೆಸಲಾಯಿತು.

Exit mobile version