ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಹಕಾರಿ ಸಂಘಗಳ ನಡುವೆ ಪೈಪೋಟಿ ಇದ್ದರೂ ಸಾರ್ವಜನಿಕರಿಗೆ ಉತ್ತಮ ಸೇವೆ ಸಹಕಾರಿ ಸಂಘಗಳು ನೀಡುತ್ತಾ ಬಂದಿರುವುದು ಸಹಕಾರಿ ಕ್ಷೇತ್ರದ ಹೆಚ್ಚುಗಾರಿಕೆ ಹೊಸ ವ್ಯವಸ್ಥೆಗಳ ಮೂಲಕ ಸಹಕಾರಿ ಕ್ಷೇತ್ರದಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ದ.ಕ ಜಿಲ್ಲೆ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಕುಂದಾಪುರ ತಾಲೂಕು ನವೀಕೃತ ಕೇಂದ್ರ ಕಚೇರಿ ಉದ್ಘಾಟಿಸಿ, ನವೀಕೃತ ಕಟ್ಟಡಕ್ಕೆ ಎರಡು ಲಕ್ಷಅನುದಾನ ನೀಡುವುದಾಗಿ ಘೋಷಿಸಿದರು. ನವೀಕೃತ ಕೇಂದ್ರದ ಮೂಲಕ ಸಾರ್ವಜನಿಕರಿಗೆಇನ್ನಷ್ಟು ಸೌಲಭ್ಯ ಲಭಿಸಲಿ ಎಂದ ಅವರು, ಸೇವೆ ಮೂಲಕ ಸಹಕಾರಿ ಕ್ಷೇತ್ರ ಬೆಳೆಯಲು ಕಾರಣವಾಗಿದ್ದು, ಸಹಾಕಾರಿ ಮಟ್ಟ ವೃದ್ಧಿಸಲೂ ಕಾರಣವಾಗಿದೆ ಎಂದು ಹೇಳಿದರು.
ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರದೇವಸ್ಥಾನ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಭದ್ರತಾಕೊಠಡಿ ಉದ್ಘಾಟಿಸಿರು. ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ಅಧ್ಯಕ್ಷ ಮಲ್ಯಾಡಿ ಮೋಹನದಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಘ ಉಪಾಧ್ಯಕ್ಷ ಸಂತೋಷಕುಮಾರ್ ಶೆಟ್ಟಿ ಬಾಳೆಮನೆ, ಕುಂದಾಪುರ ಎಪಿಎಂಸಿ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಬಾಳಿಕೆರೆ, ಸಂಘ ಮಾಜಿ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬಾಂಡ್ಯಾ, ಮಂಜಯ್ಯ ಶೆಟ್ಟಿ ಸಬ್ಲಾಡಿ, ನಿರ್ದೇಶಕರಾದ ಹೆಚ್.ಮಂಜಯ್ಯ ಶೆಟ್ಟಿ, ಹೆಚ್.ಹರಿಪ್ರಸಾದ್ ಶೆಟ್ಟಿ, ಕೆ.ಮೋಹನ್ ಪೂಜಾರಿ, ಆನಂದ ಬಿಲ್ಲವ, ಭುಜಂಗ ಶೆಟ್ಟಿ, ಹೆಚ್.ಚಂದ್ರಶೇಖರ ಶೆಟ್ಟಿ, ಎಚ್.ದೀನಪಾಲ ಶೆಟ್ಟಿ, ಸತೀಶ್ ಎಂ.ನಾಯ್ಕ್, ಬಿ.ರಘುರಾಮ ಶೆಟ್ಟಿ, ಟೀಚರ್‌ಕೋಆಪರೇಟೀವ್ ಬ್ಯಾಂಕ್ ನಿರ್ದೇಶಕ ಕೆ.ಸಿ.ರಾಜೇಜ್, ಕುಂದಾಪುರ ಭೂಅಭಿವೃದ್ದಿ ಬ್ಯಾಂಕ್‌ಅಧ್ಯಕ್ಷ ದಿನಕರ ಶೆಟ್ಟಿ ಕಾಳಾವರ, ನಗರ ಪ್ರಾಧಿಕಾರಅಧ್ಯಕ್ಷ ವಿಕಾಸ್ ಹೆಗ್ಡೆ, ವಿವಿಧ ಸಹಕಾರಿ ಸಂಘ ಅಧ್ಯಕ್ಷರಾದ ನೈಲಾಡಿ ಶಿವರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಜಯರಾಮ ಶೆಟ್ಟಿ, ಮಾರಾಟ ಸಂಘ ಮುಖ್ಯವ್ಯವಸ್ಥಾಪಕ ಹೆಚ್.ರಾಜೀವ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಮೇಶ್‌ಗಾಣಿಗಕೊಲ್ಲೂರುಇದ್ದರು.
ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ರಾಜು ಪೂಜಾರಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.