ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ರಾಷ್ಟ್ರೀಯಮಟ್ಟದಲ್ಲಿ ನಡೆದ ಸಿಎ-ಸಿಪಿಟಿ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ. 80.76 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯದಲ್ಲಿ ಅಗ್ರಸ್ಥಾನಿಯಾಗಿ ಮೂಡಿಬಂದಿದೆ.
ರಾಷ್ಟ್ರಮಟ್ಟದಲ್ಲಿ 200ರಲ್ಲಿ 192 ಅಂಕವನ್ನು ಪಡೆದ ಇಂದೋರ್ನ ವಿದ್ಯಾರ್ಥಿ ಪ್ರಥಮಸ್ಥಾನಿಯಾಗಿದ್ದು, ಆಳ್ವಾಸ್ನ ವಿದ್ಯಾರ್ಥಿನಿ ತವಿಶಿ ದೇಚಮ್ಮ 191(ಶೇ.95.50)ಅಂಕಗಳನ್ನು ಪಡೆಯುವುದರೊಂದಿಗೆ ದೇಶದಲ್ಲಿ ದ್ವಿತೀಯ, ರಾಜ್ಯದಲ್ಲೇ ಪ್ರಥಮ ಸ್ಥಾನಿಯಾಗಿದ್ದಾಳೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ಪದವಿಪೂರ್ವ ಕಾಲೇಜಿನ 130 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 105 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 61 ಮಂದಿ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಮೂಲತಃ ಮಡಿಕೇರಿಯ ತವಿಶಿ ದೇಚಮ್ಮ ಅವರು ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಿದ್ದು, 591 ಅಂಕಗಳನ್ನು ಪಡೆದ್ದರು. ಶ್ರದ್ಧಾ ಎಂ.ಎನ್ 185(ಶೇ.92.5), ಶೃಂಗೇರಿ ಮೂಲದ ಅವಳಿ ಸಹೋದರಿಯರಾದ ಸ್ವಾತಿ ಹೆಗ್ಡೆ 186(93ಶೇ), ಭವ್ಯಶ್ರೀ ಎನ್.ಹೆಗ್ಡೆ 184(ಶೇ.92) ಅಂಕಗಳೊಂದಿಗೆ ಸಾಧನೆ ಮಾಡಿದ್ದಾರೆ. ಸುಕೇಶ್ ಟಿ.ಎಸ್ 176, ಅಭಯಕಾಂತ್ 175, ಪ್ರಖ್ಯಾತ್ ಶೆಟ್ಟಿ 174, ಅದಿತಿ ಎಸ್.ಹೆಗ್ಡೆ 174, ನಾಗೇಂದ್ರ 173, ನಿಖಿಲಾ ಆಶ್ರಿತ್ 172, ಅನಿತಾ ಕೆ.ಹೆಗ್ಡೆ 172 ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಸ್ವೀಕಾರ ಯೋಜನೆಯಡಿ ಉಚಿತ ಶಿಕ್ಷಣ ಪಡೆಯುತ್ತಿರುವ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ವಿಕಲಚೇತನ ದೀಕ್ಷಿತ್ ಶೆಟ್ಟಿ 127 ಅಂಕಗಳನ್ನು ಪಡೆಯುವುದರೊಂದಿಗೆ ಸಾಧನೆ ಮಾಡಿದ್ದಾರೆ ಈತ ದ್ವಿತೀಯ ಪಿಯುಸಿಯಲ್ಲಿ ಶೇ.95 ಅಂಕಗಳನ್ನು ಗಳಿಸಿದ್ದರು. ಪದವಿಯಲ್ಲಿ 24 ಮಂದಿ ಸಿಎ-ಸಿಪಿಟಿ ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿರುವುದು ಸಂತಸ ತಂದಿದೆ. ಇದಕ್ಕೆ