ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿಯಲ್ಲಿ ನಡೆದ ದಕ್ಷ ಆವಾರ್ಡ್ ಕಾರ್ಯಕ್ರಮದಲ್ಲಿ ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್ ವರ್ಷದ ಸಾಧನೆಗೆ ಗೊಲ್ಡನ್ ಪ್ರಶಸ್ತಿ, ಅತ್ಯುತ್ತಮ ಸ್ಮಾರ್ಟ್ ಕ್ಲಾಸ್ ಪ್ರಶಸ್ತಿ, ಗೊಲ್ಡನ್ ಎಮ್ ಆರ್ ಅಭಿಯಾನ ಪ್ರಶಸ್ತಿ ಹಾಗು ಔಟ್ ಸ್ಟಾಂಡಿಂಗ್ ಕ್ಲಬ್ ಪ್ರಶಸ್ತಿ ಪಡೆದುಕೊಂಡಿದೆ. ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಯನ್ ಡಾ. ವೆಂಕಟೇಶ್ ಉಪ್ಪುಂದ, ಪೂರ್ವಾಧ್ಯಕ್ಷ ಜಿ. ಗೊಕುಲ್ ಶೆಟ್ಟಿ, ಲಯನ್, ಸುರೇಂದ್ರ ಶೆಟ್, ನೂತನ ಲಯನ್ಸ್ ಅಧ್ಯಕ್ಷ ಲಯನ್ ಕುಶಾಲ್ ಶೆಟ್ಟಿ ಮತ್ತಿತರರು ಪಾಲ್ಗೊಂಡರು.