Kundapra.com ಕುಂದಾಪ್ರ ಡಾಟ್ ಕಾಂ

ಮರವಂತೆ: ವರಾಹ ಮಾರಸ್ವಾಮಿ ಜಾತ್ರೆ ಸಂಪನ್ನ

ಕುಂದಾಪ್ರ ಡಾಟ್ ಕಾಂ ಸುದ್ದಿ,
ಕುಂದಾಪುರ: ಪುರಾಣ ಪ್ರಸಿದ್ಧ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದದಲ್ಲಿ ಕರ್ಕಾಟಕ ಅಮಾವಾಸ್ಯೆಯ ಜಾತ್ರಾ ಮಹೋತ್ಸವವು ಸಕಲ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ವಿವಿಧ ಭಾಗಗಳಿಂದ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ನಸುಕಿನಲ್ಲಿಯೇ ದೇಗುಲಕ್ಕೆ ಬಂದು ಸಮುದ್ರ ಹಾಗೂ ಸೌರ್ಪಣಿಕಾ ನದಿಯಲ್ಲಿ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಹರಕೆಗಳನ್ನು ಸಲ್ಲಿಸಿದರು.

ಭೂಮಾತೆಯನ್ನು ದುಷ್ಟ ರಕ್ಕಸರಿಂದ ರಕ್ಷಿಸಿದ ಶ್ರೀ ವರಾಹ ಸ್ವಾಮಿಯು ಲೋಕಕ್ಕೆ ಕಲ್ಯಾಣ ವನ್ನು ಉಂಟುಮಾಡಿ ಸಕಲ ಜೀವರಾಶಿಗಳನ್ನು ಕಾಯುವವನು. ಆದರಿಂದ ಸಂಪ್ರದಾಯದಂತೆ ವಿವಾಹಿತ ನವಜೋಡಿಗಳು ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆಗಳನ್ನು ಸಲ್ಲಿಸಿದ್ದರು.

ಶ್ರೀ ದೇವರು ಪ್ರಕೃತಿ ವಿಕೋಪದಿಂದ ಹಾಗೂ ಕಷ್ಟಕಾರ್ಪಣಗಳಿಂದ ರಕ್ಷಿಸಿ ಪೊರೆಯುವ ಮಹಿಮಾ ನ್ವಿತನೂ, ಅಭಯದಾತನೂ ಆಗಿ ಭಕ್ತ ಕೋಟಿ ಜನರನ್ನು ಕಾಯುತ್ತಿರುವ ದೇವರಲ್ಲಿ ಕರಾವಳಿಯ ಭಾಗದ ಮೀನುಗಾರರು ಮೀನುಗಾರಿಕೆಯಲ್ಲಿ ಸಮೃದ್ಧಿಯನ್ನು ಕರುಣಿಸು ಎಂದು ಪ್ರಾರ್ಥನೆಗೈದರು.

 

Exit mobile version