Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಇನ್ನರ್‌ವೀಲ್ ಕ್ಲಬ್ ನೂತನ ಅಧ್ಯೆಕ್ಷೆ ಶಾಂತಿ ಪಿರೇರಾ ಪದಗ್ರಹಣ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನ ಧನಾತ್ಮಕ ಚಿಂತನೆಗಳಿಂದ ಕೂಡಿದ ಕ್ರೀಯಾತ್ಮಕ ಕಾರ್ಯಗಳ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾನತೆ ಸಾಧಿಸುತ್ತಿದ್ದಾಳೆ ಎಂದು ಕಂಡ್ಲೂರಿನ ಆಯುರ್ವೇದ ವೈದ್ಯೆ ಡಾ. ಸೋನಿ ಹೇಳಿದರು.

ಇಲ್ಲಿನ ರೋಟರಿ ಭವನದಲ್ಲಿ ನಡೆದ ಇನ್ನರ್‌ವೀಲ್ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ಮಹಿಳೆಗೆ ಸಮಾಜವಾಗಲಿ ಪುರುಷರಾಗಲೀ ಶತ್ರುಗಳಲ್ಲ. ಹೆಣ್ಣಿಗೆ ಹೆಣ್ಣೆ ಶತ್ರುಗಳಾಗುತ್ತಿದ್ದಾರೆ. ಆ ನೆಲೆಯಲ್ಲಿ ಪರಸ್ಪರ ಗೆಳೆತನದಿಂದ ಕೂಡಿ ಬಾಳುವ ಒಂದು ಸೂರಿನಂತಿರುವ ಇನ್ನರ್‌ವೀಲ್ ಕ್ಲಬ್ಬಿನಲ್ಲಿ ಎಲ್ಲಾ ಸಹೋದರಿಯರು ಸಂಘಟಿತರಾಗಿ ಊರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡುವಂತಾದಾಗ ಮಾತ್ರ ಶತ್ರುತ್ವ ಮರೆಯಾಗಿ ಕತ್ತಲೆಯ ಒಳಗಿರುವ ಜ್ಞಾನ, ಭರವಸೆಗಳೆಂಬ ಬೆಳಕಿನ ಬೀಜದಂತೆ ಭವಿಷ್ಯದ ಬಾಳು ಬೆಳಗುತ್ತದೆ ಎಂದರು.

ದೇಶದಾಂದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿಯಾಗಿದ್ದು, ಸ್ತ್ರೀ ಇನ್ನೂ ಕೂಡಾ ಸ್ವತಂತ್ರಳಾಗಿಲ್ಲ ಎನ್ನುವುದನ್ನು ನಿರೂಪಿಸುತ್ತಿದೆ. ಈ ದುಶ್ಕೃತ್ಯಗಳಿಂದ ಸ್ತ್ರೀ ಸಮಾಜ ಮುಕ್ತಿ ಕಾಣದೇ ಇನ್ನೂ ಸವಾಲಾಗಿಯೇ ಉಳಿದಿದ್ದು, ಸಮಾಜದಲ್ಲಿ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಯರ ರಕ್ಷಣೆಯ ಬಗ್ಗೆ ಅಲ್ಲಲ್ಲಿ ಜಾಗೃತಿ ಸಮಾವೇಶ, ಕಷ್ಟದಲ್ಲಿರುವವರಿಗೆ ಹಾಗೂ ನೊಂದವರಿಗೆ ತಕ್ಷಣ ಸ್ಪಂದಿಸುವ ಮೂಲಕ ಮಾನವೀಯತೆಯ ಸೇವೆ ನಿಮ್ಮಿಂದಾಗಲಿ ಎಂದರು.

೨೦೧೭-೧೮ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಶಾಂತಿ ಪಿರೇರಾ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದ ಗೀತಾ ಇವರಿಗೆ ಪದಗ್ರಹಣ ಅಧಿಕಾರಿ ಚಂದ್ರಕಲಾ ಶೆಟ್ಟಿ ಪದಪ್ರದಾನ ಮಾಡಿದರು. ರೋಟರಿ ಅಧ್ಯಕ್ಷ ಮಂಜುನಾಥ ಶೆಟ್ಟಿ ಸ್ಪಂದನಾ ಬುಲೆಟಿನ್ ಬಿಡುಗಡೆ ಮಾಡಿದರು. ಈ ಸಂದರ್ಭ ಮೂವರು ನೂತನ ಸದಸ್ಯರನ್ನು ಕ್ಲಬ್ಬಿಗೆ ಸೇರಿಸಿಕೊಳ್ಳಲಾಯಿತು. ನಿಕಟಪೂರ್ವಾಧ್ಯಕ್ಷೆ ಆಶಾ ಕಿಶೋರ್ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಪ್ರೇಮಾ ಪ್ರಕಾಶ್ ವರದಿ ಮಂಡಿಸಿದರು. ಸೀತಾ ಶ್ರೀನಿವಾಸ್ ನಿರೂಪಿಸಿ, ರಾಜೀವಿ ಗೋವಿಂದ್ ವಂದಿಸಿದರು.

Exit mobile version