ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಗೊಂಬೆಮನೆಯ ತಿಂಗಳ ಕಾರ್ಯಕ್ರಮದಲ್ಲಿ ೨೦೧೬-೧೭ ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಪ್ಪಿನಕುದ್ರು ಸರಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಮಾಸ್ಟರ್ ಪ್ರಜ್ವಲ್ (೬೧೨ / ೬೨೫) ರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲರಾದ ಎಮ್. ರತ್ನಾಕರ ಪೈ ವಹಿಸಿದ್ದರು. ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್, ಪ್ರಭಾಕರ ಮಧ್ಯಸ್ತ, ಶ್ರೀಮತಿ ವಸಂತಿ ಆರ್. ಪಂಡಿತ್ ಉಪಸ್ಥಿತರಿದ್ದರು. ಪಿ. ಜಯವಂತ ಪೈ ವಂದಿಸಿದರು. ಅನಂತರ ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಮಂಡಳಿ, ಕುಂದಾಪುರ ಇವರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ರಂಜಿಸಿತು. ಅಕಾಡೆಮಿ ಬಳಗದ ನಾಗೇಶ್ ಶ್ಯಾನುಭೋಗ್ ಕಾರ್ಯಕ್ರಮ ನಿರ್ವಹಿಸಿದರು.