Kundapra.com ಕುಂದಾಪ್ರ ಡಾಟ್ ಕಾಂ

ಗ್ರೀನ್ ವ್ಯಾಲಿ ಕಾಲೇಜು ಸಂಸ್ಥಾಪಕ ಸೈಯದ್ ಅಬ್ದುಲ್ ಖಾದರ್ ಬಾಶು ಇನ್ನಿಲ್ಲ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಶಿರೂರು ಭಾಗದ ಅಭಿವೃದ್ಧಿಯ ಕನಸುಗಾರ, ಶೈಕ್ಷಣಿಕ ಸಾಮಾಜಿಕ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದ ದುಬೈ ಉದ್ಯಮಿ ಸೈಯದ್ ಅಬ್ದುಲ್ ಖಾದರ್ ಬಾಶು (55) ಇಂದು ಹೃದಯಾಘಾತದಿಂದ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸೈಯದ್ ಅಬ್ದುಲ್ ಖಾದರ್ ಬಾಶು ಮೂಲತ: ಶಿರೂರಿನವರು. ಅಂತರಾಷ್ಟ್ರೀಯ ಗುಣಮಟ್ಟದ ಗ್ರೀನ್ ವ್ಯಾಲಿ ಪ. ಪೂ ಕಾಲೇಜು ಶಿರೂರು, ದೀನಾ ಶಿಕ್ಷಣ ಸಂಸ್ಥೆ, ಅಂಗವಿಕಲ ಮಕ್ಕಳಿಗೆ ಉಚಿತ ಶಿಕ್ಷಣದ ಮೂಲಕ ಶೈಕ್ಷಣಕ ರಂಗದಲ್ಲಿ ತೊಡಗಿಸಿಕೊಂಡಿದ್ದರೇ, ಬಡವರಿಗೆ ಉಚಿತ ಅಂಬ್ಯುಲೆನ್ಸ್ ಸೇವೆ, ಪ್ರತಿ ಮನೆಗೂ ನೀರಿನ ಸೌಲಭ್ಯ, ಬೀದಿ ದೀಪದ ಸೌಕರ್ಯ ಮುಂತಾದ ಕಾರ್ಯಕ್ರಮಗಳ ಮೂಲಕ ಸಾಮಾಜಿಕ ರಂಗದಲ್ಲಿಯೂ ತೊಡಗಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. 

ಕಾಲೇಜು ದಿನಗಳಲ್ಲಿ ಸಂಘಟನಾ ಚಾತುರ್ಯದಿಂದ ನಾಯಕತ್ವ ಗುಣ ಮೈಗೂಡಿಸಿಕೊಂಡವರು. ದುಬೈನಲ್ಲಿ ಉದ್ಯಮಿಯಾಗಿ ಬೆಳೆದ ನಂತರ ತನ್ನೂರಿನ ನಂಟು ಬಿಟ್ಟಿರಲಿಲ್ಲ. ಸರಕಾರಿ ಯೋಜನೆಯನ್ನು ಶಿರೂರು ಗ್ರಾಮಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು. ಶಿರೂರು ಕರಾವಳಿ ರಸ್ತೆಯ ಸೇತುವೆಗೆ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಮೂಲಕ ಅನುದಾನ ದೊರಕಿಸಿಕೊಟ್ಟ ಹೆಗ್ಗಳಿಕೆ, ಸಂಸದರ ಗ್ರಾಮವನ್ನಾಗಿ ಶಿರೂರು ಆಯ್ಕೆಯಾಗುವಲ್ಲಿ ಇವರ ತೋರಿದ ಮುತುವರ್ಜಿ ಹೀಗೆ ತನ್ನ ಹುಟ್ಟೂರಿನ ಅಭಿವೃದ್ಧಿಗಾಗಿ ಅವಿತರವಾಗಿ ಶ್ರಮಿಸಿದ್ದರು.

 

Exit mobile version