Site icon Kundapra.com ಕುಂದಾಪ್ರ ಡಾಟ್ ಕಾಂ

ಗುರುಕುಲ ಪುಟಾಣಿಗಳಿಂದ ಬೇಳೂರು ಸ್ಪೂರ್ತಿಧಾಮ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಪೂರ್ವಪ್ರಾಥಮಿಕ ಪುಟಾಣಿಗಳು ಶೇರಿಂಗ್ ಡೇ ಯನ್ನು ಸಾಂಕೇತಿಕವಾಗಿ ಆಚರಿಸಿದರು.

ಆ ಪ್ರಯುಕ್ತವಾಗಿ ಪುಟಾಣಿಗಳಿಂದ ಹಲವಾರು ಬಗೆಯ ಕಲಿಕಾ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಸಂಗ್ರಹಿಸಿದ ಕಲಿಕಾ ಸಾಮಗ್ರಿಗಳನ್ನು ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಮುಖ್ಯ ಶಿಕ್ಷಕಿ ವಿಶಾಲಾ ಶೆಟ್ಟಿ, ಸಹ ಶಿಕ್ಷಕಿಯರಾದ ಶ್ವೇತಾ, ವೀಣಾ ಹಾಗೂ ಪುಟಾಣಿಗಳ ಜೊತೆ ಸೇರಿ ಬೇಳೂರು ಸ್ಪೂರ್ತಿಧಾಮಕ್ಕೆ ಕೊಡುಗೆಯಾಗಿ ನೀಡಲಾಯಿತು.

ಕೊಡುಗೆಯನ್ನು ಸ್ವೀಕರಿಸಿದ ಸ್ಪೂರ್ತಿಧಾಮದ ಸಿಬ್ಬಂದಿ ವರ್ಗದವರಾದ ಶಶಿಕಲಾ, ಶಾರದಾ ಹಾಗೂ ಶೀನ ಭಂಡಾರಿಯವರು ಮಕ್ಕಳೆಲ್ಲರಿಗೂ ಮನತುಂಬಿ ಹಾರೈಸಿ, ಕೃತಜ್ಞತೆ ಅರ್ಪಿಸಿದರು.

Exit mobile version