Site icon Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ: ದೇವಾಡಿಗ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಮರವಂತೆ, ನಾವುಂದ, ಬಡಾಕೆರೆ, ಹೇರೂರು ಗ್ರಾಮಗಳ ದೇವಾಡಿಗ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಕಾರ್ಯಕ್ರವು ಶನಿವಾರ ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆಯಿತು. ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ ತಿಮ್ಮ ದೇವಾಡಿಗ ಅಧ್ಯಕ್ಷತೆಯಲ್ಲಿ ಉದ್ಯಮಿ ಎನ್. ರಮೇಶ ದೇವಾಡಿಗ ಉದ್ಘಾಟಿಸಿದರು.

ಉದ್ಯಮಿ ಕುದ್ರುಕೋಡು ಪ್ರಕಾಶ ದೇವಾಡಿಗ, ಬಡಾಕೆರೆ ಜನಾರ್ದನ ಎಂ. ದೇವಾಡಿಗ, ಕೊಲ್ಲೂರು ಡಾಟ್ ಕಾಂ ಸಂಯೋಜಕಿ ಪ್ರಿಯದರ್ಶಿನ ದೇವಾಡಿಗ ಪುಸ್ತಕ ವಿತರಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜು ದೇವಾಡಿಗ, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ, ಮರವಂತೆ ಗೋಪಾಲ ದೇವಾಡಿಗ ಅತಿಥಿಗಳಾಗಿದ್ದರು.

ವಾದ್ಯ ಕಲಾವಿದರಾದ ಹೆಮ್ಮಾಡಿ ರಾಘವೇಂದ್ರ ದೇವಾಡಿಗ, ಕುಂದಾಪುರದ ನಿತ್ಯಾನಂದ ದೇವಾಡಿಗ, ಕುಂಭಾಶಿಯ ಕೌಶಿಕ್ ದೇವಾಡಿಗ, ಕೋಣಿಯ ಸತೀಶ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಜೆ. ಪಿ. ಬಡಾಕೆರೆ ಸ್ವಾಗತಿಸಿದರು. ತಲ್ಲೂರು ರವಿ ದೇವಾಡಿಗ ನಿರೂಪಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Exit mobile version