Kundapra.com ಕುಂದಾಪ್ರ ಡಾಟ್ ಕಾಂ

ಕೋಡಿ ಬ್ಯಾರೀಸ್‌ನಲ್ಲಿ ಎನ್.ಎಸ್.ಎಸ್ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಣಯಿಸುವುದು ವ್ಯಕ್ತಿಯ ಮನಸ್ಥಿತಿ ಇಂತಹ ಮನಸ್ಥಿತಿಯನ್ನು ಉತ್ತಮ ಹಾದಿಗೆ ಕರೆದೊಯ್ಯುವುದು ರಾಷ್ಡ್ರೀಯ ಸೇವೆ ಎನ್ನುವ ಮನೋಭಾವನೆ ಇದಕ್ಕೆ ತಕ್ಕ ವೇದಿಕೆಯೇ ಈ ರಾಷ್ಟ್ರೀಯ ಸೇವಾ ಯೋಜನೆ ಘಟಕ ವಿದ್ಯಾರ್ಥಿಗಳು ಇಂದಿನ ಸಮಾಜದ ನೈಜ ಚಿತ್ರಣವನ್ನು ತಿಳಿದುಕೊಳ್ಳಬೇಕು. ನಮ್ಮದು ಭಾರತ ಮಾತೆ ಎಂದು ಕರೆಯಲ್ಪಡುವ ರಾಷ್ಟ್ರ ಇಲ್ಲಿ ಅನೇಕ ಧರ್ಮ ಜಾತಿಯಿಂದ ಕೊಡಿದೆ. ನಮ್ಮಲ್ಲಿ ಜಾತಿ ಬೇಧವಿಲ್ಲದೇ ಒಗ್ಗೂಡಿ ರಾಷ್ಟ್ರದ ಅಭಿವೃಧ್ದಿಗೆ ಶ್ರಮಿಸಬೇಕು. ನಮ್ಮ ರಾಷ್ಟ್ರೀಯಾ ಸೇವಾ ಯೋಜನೆಯಂತಹ ಘಟಕಗಳನ್ನು ಉಪಯೋಗಿಸಿ ಕೊಂಡು ಸಾಕಷ್ಟು ಸೇವಾ ಮನೋಭವದಿಂದ ಸೇವೆ ಸಲ್ಲಿಸಿ ದೇಶದ ಅಭಿವೃದ್ದಿಯ ಕಡೆ ಗಮನ ಹರಿಸಿ ಎಂದು ಬ್ಯಾರೀಸ್ ಕಾಲೇಜಿನ ರಾಷ್ಟ್ರೀಯಾ ಸೇವಾ ಯೋಜನಾ ಘಟಕವನ್ನು ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಸಲಹ ಸಮಿತಿಯ ಸದಸ್ಯ, ಪ್ರಥಮ ದರ್ಜೆ ಕಾಲೇಜು ಶಂಕರನಾರಾಯಣದ ಪ್ರಾಂಶುಪಾಳ ಡಾ. ಉದಯ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಗಿಡಕ್ಕೆ ನೀರುಣಿಸುವುದೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಮೀರ್ ವಹಿಸಿದ್ದರು. ಘಟಕದ ಯೋಜನಾಧಿಕಾರಿ ವಿದ್ಯಾಧರ ಪೂಜಾರಿ, ಉಪನ್ಯಾಸಕರು ವಾಣಿಜ್ಯ ವಿಭಾಗ ಉಪಸ್ಥಿತರಿದ್ದರು. ಯೋಜನಾಧಿಕಾರಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಕು. ಕವನ ದ್ವಿತೀಯ ಬಿ.ಕಾಂ ವಂದಿಸಿದರು. ಕು.ಸುಹಾನ ದ್ವಿತೀಯ ಬಿಸಿಎ ಕಾರ್ಯಕ್ರಮ ನಿರೂಪಿಸಿದರು.

Exit mobile version