Site icon Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಮುಕಾಂಬಿಕಾ ರೈಲು ನಿಲ್ದಾಣವನ್ನು ಹೆರಿಟೇಜ್ ನಿಲ್ದಾಣವನ್ನಾಗಿಸಿ: ರೈಲ್ವೆ ಸಚಿವರಿಗೆ ಯಡ್ಯೂರಪ್ಪ ಒತ್ತಾಯ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಪ್ರತಿಶ್ಟಿತ ಮುಕಾಂಬಿಕಾ ರೈಲು ನಿಲ್ದಾಣವನ್ನು ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸುಸಜ್ಜಿತ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿಪಡಿಸಿ ಹೆರಿಟೇಜ್ ನಿಲ್ದಾಣವಾಗಿ ಘೋಷಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಿ. ಎಸ್ ಯಡಿಯೂರಪ್ಪ ರೈಲ್ವೆ ಸಚಿವರನ್ನು ಒತ್ತಾಯಿಸಿದ್ದಾರೆ.

ಅವರು ದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಈ ನಿಲ್ದಾಣಕ್ಕೆ ಹೆಚ್ಚುವರಿಯಾಗಿ ಮಂಗಳ ಮತ್ತು ಪೂರ್ಣ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಕೂಡ ಸಚಿವರನ್ನು ಆಗ್ರಹಿಸಿದರು. ಈ ಸಂದರ್ಭ ಬೈಂದೂರಿನ ಮೂಕಾಂಬಿಕ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಮತ್ತು ಉದ್ಯಮಿ ಗೋಪಾಲಕೃಷ್ಣ ಉಪಸ್ಥಿತರಿದ್ದರು

Exit mobile version