Kundapra.com ಕುಂದಾಪ್ರ ಡಾಟ್ ಕಾಂ

ಲಯನ್ಸ್ ಕ್ಲಬ್ ವಡೇರಹೋಬಳಿ ಪದಗ್ರಹಣ ಸಮಾರಂಭ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಲಯನ್ಸ್ ಕ್ಲಬ್ ವಡೇರಹೋಬಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದಿನಾಂಕ ೧೪-೭-೨೦೧೭ ನೇ ಬುಧವಾರದಂದು ಹೋಟೆಲ್ ನಿಸರ್ಗದ ಆರ್.ಸಿ ಕನ್‌ವೆನ್ಸ್‌ನ್ ಹಾಲ್ ಹಟ್ಟಿಯಂಗಡಿ ಕ್ರಾಸಿನಲ್ಲಿ ನೆರವೇರಿಸಲಾತು. ಇದರ ಪದಗ್ರಹಣವನ್ನು ಲಯನ್ ವಿ.ಜಿ.ಶೆಟ್ಟಿ ಎಂ.ಜೆ.ಎಫ್.೨ನೇ ಉಪ ಜಿಲ್ಲಾ ಗವರ್ನರ್ ರವರು ನೆರವೇರಿಸಿರಿತ್ತಾರೆ. ನೂತನ ಅಧ್ಯಕ್ಷರಾಗಿ ಲಯನ್ ಜಯಂತ್ ಶಟ್ಟಿ, ಕಾರ್ಯದರ್ಶಿಯಾಗಿ ಲಯನ್ ಜಗದೀಶ ಶೇರೆಗಾರ ಹಾಗೂ ಖಜಾಂಚಿಯಾಗಿ ಲಯನ್ ಶಾಂತಿ ಸಾಗರ್ ಶೆಟ್ಟಿಯವರನ್ನು ಆರಿಸಲಾಯಿತು. ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾದ ಲಯನ್ ಅರುಣ ಕುಮಾರ್ ಹೆಗ್ಡೆ ಹಾಗೂ ಪ್ರಾಂತೀಯ ಅಧ್ಯಕ್ಷರಾದ ಲಯನ್ ಬಿ.ಎಸ್.ಪ್ರತಾಪ್‌ಚಂದ್ರ ಶೆಟ್ಟಿಯವರು ಹಾಜರಿರುತ್ತಾರೆ. ಅತಿಥಿಗಳಿಂದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಆಗಮಿಸಿದಂತಹ ಅತಿಥಿಗಳನ್ನು ಲಯನ್ನ್‌ನ ಅಧ್ಯಕ್ಷರು ಸ್ವಾಗತಿಸಿ, ಕಾರ್ಯದರ್ಶಿಯವರು ಧನ್ಯವಾದವನ್ನು ಮಂಡಿಸಿರುತ್ತಾರೆ ಹಾಗೂ ಲಯನ್ ರಂಜನ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version