Site icon Kundapra.com ಕುಂದಾಪ್ರ ಡಾಟ್ ಕಾಂ

ಶಾಂತಿ ಕೆ. ಅಪ್ಪಣ್ಣ ಅವರಿಗೆ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ನಿಡುತ್ತಿರುತ್ತಿರುವ ಸಾಹಿತ್ಯ ಪ್ರಶಸ್ತಿ ಈ ವರ್ಷ ಶಾಂತಿ ಕೆ. ಅಪ್ಪಣ್ಣ ಅವರ ’ ಮನಸು ಅಭಿಸಾರಿಕೆ’ ಸಣ್ಣಕಥೆಗಳ ಸಂಕಲನಕ್ಕೆ ದೊರೆತಿದೆ. ಮೂಲತಃ ಕೊಡಗಿನವರಾದ ಶಾಂತಿ. ಕೆ. ಅಪ್ಪಣ್ಣ ನೌಕರಿ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದಾರೆ. ಇವರ ಕಥೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಪ್ರಜವಾಣಿ ಮತ್ತು ವರ್ತಮಾನ ಡಾಟ್ ಕಾಂ ನಡೆಸುವ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ. ಕಥಾಸಂಕಲನಕ್ಕೆ ಈಗಾಗಲೇ ಛಂದ ಪುಸ್ತಕ ಬಹುಮಾನ, ಕೊಡಗಿನ ಗೌರಮ್ಮ ಪ್ರಶಸ್ತಿಗಳಲ್ಲದೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಈ ವರ್ಷದ ಯುವ ಪುರಸ್ಕಾರ ಬಂದಿದೆ.

ತೀರ್ಪುಗಾರರಾಗಿ ಡಾ. ವಿಕ್ರಮ ವಿಸಾಜಿ, ಗುಲ್ಬರ್ಗಾ, ಡಾ. ವಿನಯಾ ಒಕ್ಕುಂದ, ಧಾರವಾಡ, ನರೇಂದ್ರ ಪೈ, ಮಂಗಳೂರು ಸಹಕರಿಸಿರುತ್ತಾರೆ. ಅ.14 ರಂದು ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಪ್ರಶಸ್ತಿಯು ೧೫ಸಾವಿರ ರೂಪಾಯಿಯೊಂದಿಗೆ ಬೆಳ್ಳಿ ಫಲಕವನ್ನೊಳಗೊಂಡಿದೆ.

Exit mobile version