ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ, ಕ್ರೀಡಾಪಟು ಕಾವ್ಯಾ ಪೂಜಾರಿ ಸಾವಿನ ಕುರಿತು ಸಮಗ್ರ ತನಿಕೆ ನಡೆಸಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕುಂದಾಪುರದ ಎಬಿವಿಪಿ ನೇತೃತ್ವದಲ್ಲಿ ಡಾ. ಬಿ. ಬಿ ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭನೆ ಜರುಗಿತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಘವೇಂದ್ರ ಮಾತನಾಡಿ ಕ್ರೀಡಾಪಟು ಕಾವ್ಯ ಸಾವಿನ ಸುತ್ತ ಹಲವು ಅನುಮಾನಗಳಿದ್ದು ಕ್ರೀಡಾಪಟುವಿನ ಸಾವು ಸಂಶಯ ಮೂಡಿಸುತ್ತಿದೆ. ಹಲವು ದಿನಗಳಿಂದ ಇಡಿ ಪ್ರಕರಣ ಗೊಂದಲ ಹುಟ್ಟಿಸಿದೆ. ಸಾವಿನ ಕುರಿತಾಗಿ ಪೊಲೀಸ್ ಇಲಾಖೆ ವಸ್ತುನಿಷ್ಠ ತನಿಕೆ ನಡೆಸಿ ಕುಟುಂಬಿಕರಿಗೆ ನ್ಯಾಯ ಒದಗಿಸಬೇಕಿದೆ ಎಂದು ಆಗ್ರಹಿಸಿದರು.
ಕುಂದಾಪುರ ಡಾ. ಬಿ. ಬಿ ಹೆಗ್ಡೆ ಪ್ರಥಮದರ್ಜೆ ಕಾಲೇಜಿನಿಂದ ಮಿನಿವಿಧಾನಸೌದದ ತನಕ ಪ್ರತಿಭಟನಾ ರ‍್ಯಾಲಿ ನಡೆಸಿದ ವಿದ್ಯಾರ್ಥಿಗಳು ಬಳಿಕ ತಹಶೀಲ್ದಾರ್ ಬೋರ್ಕರ್ ಅವರ ಮೂಲಕ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳಾದ ಗಣೇಶ್, ಭರತ್, ಶ್ರೀಧರ್, ಪ್ರಗತಿ, ಅಕ್ಷತಾ, ಪ್ರತ್ಯಾರ್ಥ, ಆಶ್ರಿತಾ, ಪವನ್, ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.