Kundapra.com ಕುಂದಾಪ್ರ ಡಾಟ್ ಕಾಂ

ಡಿಕೆಶಿ ಮನೆ ಮೇಲೆ ಐಟಿ ದಾಳಿ ರಾಜಕೀಯ ಪ್ರೇರಿತ: ಕುಂದಾಪುರ ಹಾಗೂ ಬೈಂದೂರು ಕಾಂಗ್ರೆಸ್‌ನಿಂದ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ/ಬೈಂದೂರು: ಅಗಸ್ಟ್ 8ರಂದು ನಡೆಯಲಿರುವ ರಾಜ್ಯಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಗರು ಗುಜರಾತ್ ಕಾಂಗ್ರೆಸ್‌ನ ಶಾಸಕರುಗಳಿಗೆ ಕೋಟ್ಯಾಂತರ ರೂಪಾಯಿ ಆಮಿಷ ಒಡ್ಡುತ್ತಿದ್ದಾರೆ. ಮತ್ತು ಅವರಿಂದ ರಾಜೀನಾಮೆ ಕೊಡಿಸುತ್ತಿದ್ದಾರೆ. ಆ ಕಾರಣಕ್ಕೆ ಇಂದನ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಗುಜರಾತ್‌ನ 44 ಶಾಸಕರಿಗೆ ಕರ್ನಾಟಕದಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು. ಇದರಿಂದ ಹತಾಶರಾದ ಬಿಜೆಪಿ ಹೈಕಮಾಂಡ್ ರಾಜಕೀಯ ದುರುದ್ದೇಶದಿಂದ ಡಿಕೆಶಿಯವರ ಮನೆ ಮೇಲೆ ಐಟಿ ದಾಳಿ ಮಾಡಿಸುವ ಮೂಲಕ ಅತೀ ನೀಚ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ. ಜೈಲಿಗೆ ಹೋಗಿ ಬಂದ ಕರ್ನಾಟಕದ ಪ್ರಪ್ರಥಮ ಮುಖ್ಯಮಂತ್ರಿ ಎಂದೇ ಕುಖ್ಯಾತರಾಗಿರುವ ಯಡಿಯೂರಪ್ಪನವರ ನೇತೃತ್ವದ ಈ ಬಿಜೆಪಿ ಪಕ್ಷದವರು ಈ ಐಟಿ ದಾಳಿಯು ಭ್ರಷ್ಟಾಚಾರದ ವಿರುದ್ಧದ ಸಮರ ಎಂದು ಹೇಳಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ.

ಅವರು ಇಂದು ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ನಡೆದ ಕಾಂಗ್ರೇಸ್ ಪಕ್ಷದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಂದಾಪುರದ ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಕೆ. ಶಿವಾನಂದ, ಎ.ಪಿ.ಎಮ್.ಸಿ ಉಪಾಧ್ಯಕ್ಷ ಗಣೇಶ್ ಸೇರೆಗಾರ್, ನಗರ ಕಾಂಗ್ರೇಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ, ಕೆ.ಪಿ.ಸಿ.ಸಿ. ಐಟಿ ಸೆಲ್ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ವಿ. ಪುತ್ರನ್, ಯುವ ಕಾಂಗ್ರೇಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾಕರ ಕೋಡಿ, ಶ್ರೀಧರ ಸೇರೆಗಾರ್, ಕೇಶವಭಟ್, ಚಂದ್ರ ಅಮೀನ್, ದೇವಕಿ ಸಣ್ಣಯ್ಯ, ಯುವ ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಕ್ವಾಡಿ ರಮೇಶ್ ಶೆಟ್ಟಿ, ಮುಖಂಡರುಗಳಾದ ಕೃಷ್ಣ ಮೊಗವೀರ, ವಿಜಯಧರ, ರಘುರಾಮ ನಾಯ್ಕ ಹೇರಿಕುದ್ರು, ಚಂದ್ರಕಾಂತ ನಾಯ್ಕ, ವಿಠಲ ಕಾಂಚನ್, ಯುವ ಕಾಂಗ್ರೇಸ್‌ನ ಪದಾಧಿಕಾರಿಗಳಾದ ರವಿಚಂದ್ರ ಕುಲಾಲ್, ದಿನೇಶ್ ಖಾರ್ವಿ, ಶಶಿಕಾಂತ ಕಾಂಚನ್, ಸಂಪತ್ ಶೆಟ್ಟಿ, ಸುರೇಂದ್ರ ಪೂಜಾರಿ, ಸಂದೀಪ್, ವೈ.ಬಿ.ರಾಘವೇಂದ್ರ, ಆಸಿಫ್ ಹೈಕಾಡಿ ಮುಂತಾದವರು ಉಪಸ್ಥಿತರಿದ್ದರು.

ಬೈಂದೂರು ಯುವ ಕಾಂಗ್ರೆಸ್ ವತಿಯಿಂದ ಬೈಂದೂರು ಬೈಪಾಸ್ ಬಳಿ ಪ್ರತಿಭಟನೆ ಜರುಗಿತು. ಈ ಸಂದರ್ಭ ಬೈಂದೂರು ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ವಸಂತ ಹೆಗ್ಡೆ ಅರೆಶಿರೂರು, ಸುಬ್ರಹ್ಮಣ್ಯ ಪೂಜಾರಿ, ಸನತ್ ಬಳೆಗಾರ್, ಪವನ ಗಾಣಿಗ ಕೊಲ್ಲೂರು, ರೋಶನ್ ಪೂಜಾರಿ, ಪ್ರಜ್ವಲ್ ದೇವಾಡಿಗ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Exit mobile version